alex Certify ನಾರ್ವೆ ರಾಯಭಾರಿ ಕಚೇರಿಯನ್ನು ವಶಪಡಿಸಿಕೊಂಡು ವೈನ್ ಬಾಟಲ್ ಧ್ವಂಸ ಮಾಡಿದ ತಾಲಿಬಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾರ್ವೆ ರಾಯಭಾರಿ ಕಚೇರಿಯನ್ನು ವಶಪಡಿಸಿಕೊಂಡು ವೈನ್ ಬಾಟಲ್ ಧ್ವಂಸ ಮಾಡಿದ ತಾಲಿಬಾನಿಗಳು

ಕಾಬೂಲ್​ನಲ್ಲಿರುವ ನಾರ್ವೆ ​ ರಾಯಭಾರ ಕಚೇರಿಯನ್ನು ವಶಕ್ಕೆ ಪಡೆದ ತಾಲಿಬಾನಿಗಳು ಸಂಸ್ಥೆಯಲ್ಲಿ ವೈನ್​ ಬಾಟಲಿಗಳನ್ನು ಒಡೆದು ಪುಸ್ತಕಗಳನ್ನು ನಾಶ ಮಾಡಿದ್ದಾರೆ.

ಇರಾನ್​ನ ನಾರ್ವೆ ​ರಾಯಭಾರಿಯಾಗಿರುವ ಸಿಗ್ವಾಲ್​​ ಹೌಜ್​​ ಈ ಸಂಬಂಧ ಟ್ವೀಟ್​ ಮಾಡಿದ್ದು, ತಾಲಿಬಾನಿಗಳು ಕಾಬೂಲ್​ನಲ್ಲಿರುವ ನಾರ್ವೇಜಿಯನ್​ ರಾಯಭಾರ ಕಚೇರಿಯನ್ನು ವಶಪಡಿಸಿಕೊಂಡಿದ್ದಾರೆ. ವೈನ್​ ಬಾಟಲಿಗಳನ್ನು ಒಡೆದು ಮಕ್ಕಳ ಪುಸ್ತಕಗಳನ್ನು ನಾಶಪಡಿಸಬೇಕು. ಬಂದೂಕುಗಳು ಕಡಿಮೆ ಅಪಾಯಕಾರಿ ಎಂದು ಬರೆದಿದ್ದಾರೆ.

ಇದಕ್ಕೂ ಮೊದಲು ತಾಲಿಬಾನ್​ ರಾಯಭಾರಿಗಳು ಸೇರಿದಂತೆ ವಿದೇಶಗಳ ರಾಜತಾಂತ್ರಿಕ ಸಂಸ್ಥೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿತ್ತು.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸ್ಥಾಪಿಸಲಿರುವ ಸರ್ಕಾರವನ್ನು ಹಿಬತುಲ್ಲಾ ಅಖುಂಡಜಾದ ಮುನ್ನಡೆಸುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದರಿಂದ ಕಳೆದ ತಿಂಗಳು ಡೆನ್ಮಾರ್ಕ್ ಹಾಗೂ ನಾರ್ವೆ ಕಾಬೂಲ್​ನಲ್ಲಿ ತಮ್ಮ ರಾಯಭಾರ ಕಚೇರಿಗಳನ್ನು ಬಂದ್​ ಮಾಡಿ ಸಿಬ್ಬಂದಿ ಸ್ಥಳಾಂತರ ಮಾಡುವುದಾಗಿ ಘೋಷಣೆ ಮಾಡಿದ್ದವು.

— Ambassador Sigvald Hauge (@NorwayAmbIran) September 8, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...