
ರೆಡ್ಡಿಟ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೊದಲ್ಲಿ, ಒಬ್ಬ ವ್ಯಕ್ತಿಯು ತನ್ನ ಮನೆಯ ಹೊರಗೆ ಸ್ಟ್ರಾಲರ್ ನಲ್ಲಿ ಮಗು ಕೂರಿಸಿಕೊಂಡು ವಿಹಾರಕ್ಕೆ ಬಂದ ಸಂದರ್ಭದಲ್ಲಿ ಅವನ ನಾಯಿಯೂ ಜೊತೆಗೆ ಬಂದಿರುತ್ತದೆ. ಅದು ಹಿಂಬಾಲಿಸುತ್ತಿರುವ ವೇಳೆ ಇದ್ದಕ್ಕಿದ್ದಂತೆ, ಮತ್ತೊಂದು ನಾಯಿ ದಾಳಿ ಮಾಡುತ್ತದೆ.
ಈ ವೇಳೆ ತನ್ನ ನಾಯಿಯನ್ನು ರಕ್ಷಿಸಲು ಮುಂದಾಗುತ್ತಾನೆ. ಇಷ್ಟರಲ್ಲಿ ಇಳಿಜಾರಿನಲ್ಲಿ ಮಗು ಕುಳಿತಿದ್ದ ಸ್ಟ್ರಾಲರ್ ಜಾರಿ ಮುಂದಕ್ಕೆ ಹೋಗಿಬಿಡುತ್ತದೆ. ಆಗ ಆ ವ್ಯಕ್ತಿಗೆ ಅದನ್ನೂ ರಕ್ಷಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿ ನಾಯಿ ಎತ್ತಿಕೊಂಡು ಸ್ಟ್ರಾಲರ್ ಹಿಡಿಯಲು ಓಡುತ್ತಾನೆ.
ಇದೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಕ್ಲಿಪ್ ನೆಟ್ಟಿಗರನ್ನು ಚರ್ಚೆಗೆ ಎಳೆದಿದೆ. ಅನೇಕರು ತಮಗಾದ ಅನುಭವಗಳಲ್ಲಿ ಈ ವಿಡಿಯೋ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.