alex Certify ನಾಯಿಯ ಕೈಹಿಡಿದು ಮುತ್ತಿಟ್ಟ ಪುಟ್ಟ ಬಾಲಕ: ಕ್ಯೂಟ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯ ಕೈಹಿಡಿದು ಮುತ್ತಿಟ್ಟ ಪುಟ್ಟ ಬಾಲಕ: ಕ್ಯೂಟ್ ವಿಡಿಯೋ ವೈರಲ್

Little boy fondly kisses dog's paw and netizens can't handle the cuteness. Viral  video - Trending News Newsಇಂದಿನ ಬ್ಯುಸಿ ಲೈಫ್ ನ ನಡುವೆ ಎಲ್ಲರಿಗೂ ಕೊಂಚ ವಿರಾಮ ಅತ್ಯಗತ್ಯವಾಗಿರುತ್ತದೆ. ಆ ಒತ್ತಡವನ್ನು ಮುದ್ದಾದ ವಿಡಿಯೋಗಳು ದೂರ ಮಾಡುತ್ತದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ನಿಮ್ಮ ಮನಮುದಗೊಳ್ಳೋದ್ರಲ್ಲಿ ಸಂಶಯವೇ ಇಲ್ಲ. ಈ ವಿಡಿಯೋ ನಿಮ್ಮನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ. ಅಷ್ಟು ಮುದ್ದಾಗಿದೆ ಶ್ವಾನ ಹಾಗೂ ಮಗುವಿನ ಈ ವಿಡಿಯೋ.

ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ನಾಯಿಯ ಮುಂದೆ ಕುಣಿಯುತ್ತಿರುವುದನ್ನು ತೋರಿಸುತ್ತದೆ. ನಾಯಿ ಕೂಡ ಅಷ್ಟೇ ಅಕ್ಕರೆಯಿಂದ ಬಾಲಕನನ್ನು ಕಾಣುತ್ತದೆ. ಈ ವೇಳೆ ಪುಟ್ಟ ಬಾಲಕ ಪ್ರೀತಿಯಿಂದ ನಾಯಿಯ ಕೈಯನ್ನು ಹಿಡಿದು ಮುತ್ತಿಡುತ್ತಾನೆ.

ಈ ವಿಡಿಯೋ ವೈರಲ್ ಆಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರಂತೂ ಫುಲ್ ಹ್ಯಾಪಿ ಆಗಿದ್ದಾರೆ. ಈ ವಿಡಿಯೋ ಪ್ರಸ್ತುತ ಜಗತ್ತಿಗೆ ಅಗತ್ಯವಿರುವ ಸಮಾಜವಾಗಿದೆ ಎಂದು ಹಲವರು ಹಂಚಿಕೊಂಡಿದ್ದಾರೆ. ಶ್ವಾನ ಹಾಗೂ ಬಾಲಕನ ಮುಗ್ಧತೆಗೆ ನೆಟ್ಟಿಗರು ಮನಸೋತಿದ್ದಾರೆ. ಹಾಗೆಯೇ ಇನ್ನೊಬ್ಬ ಬಳಕೆದಾರರು ಮಗುವಿನ ಜೊತೆ ಎರಡು ನಾಯಿಮರಿಗಳು ಆಟವಾಡುತ್ತಿರುವ ಉಲ್ಲಾಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

— Buitengebieden (@buitengebieden) May 20, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...