ಬೆಂಗಳೂರು: ಹಿಂದೂ ಎಂಬ ಪದದಿಂದಲೇ ದೇಶದಲ್ಲಿ ಅಪಾಯ ಸೃಷ್ಟಿಯಾಗಿದೆ. ನಾನು ಹಿಂದೂ ಅಲ್ಲ, ಆದರೆ ಲಿಂಗಾಯಿತ, ಬಸವಣ್ಣನ ಅನುಯಾಯಿ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸರ್ವಜನಾಂಗದ ಶಾಂತಿಯ ತೋಟ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಕುಂ. ವೀರಭದ್ರಪ್ಪ, ಹಿಂದೂಗಳು ಬಹುಸಂಖ್ಯಾತರು ಎನ್ನುವುದು ಸರಿಯಲ್ಲ. ದೇಶದಲ್ಲಿ 20 ಕೋಟಿ ಮುಸ್ಲಿಂರು, ಸಿಖ್ ರು, ಜೈನರು ಎಲ್ಲರೂ ಇದ್ದಾರೆ. ಹಿಂದೂ ಎಂಬ ಪದದಿಂದಲೆ ದೇಶದಲ್ಲಿ ಅಪಾಯ ಸೃಷ್ಟಿಯಾಗಿದೆ ಎಂದರು.
BIG NEWS: ಹಿಂದಿ ಮಾಧ್ಯಮದಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಿದೆ ಈ ರಾಜ್ಯ
ನಾವು ವರ್ತಮಾನದಲ್ಲಿ ಬದುಕುತ್ತಿಲ್ಲ, ಭೂತಕಾಲಕ್ಕೆ ಹೋಗುತ್ತಿದ್ದೇವೆ. ಹೋರಾಟ ಮಾಡುತ್ತಿರುವವರೆಲ್ಲ ಮೇಲ್ವರ್ಗದವರಲ್ಲ, ಶೂದ್ರ ಯುವಕರು. ಹಲಾಲ್ ಎಂಬುದು ಸಮಸ್ಯೆಯಲ್ಲ, ಹಿಜಾಬ್ ಒಂದು ವಸ್ತ್ರ ಅಷ್ಟೇ. ದೇಶದಲ್ಲಿ ಮುಸ್ಲಿಂರು ವ್ಯಾಪಾರ ಮಾಡಬಾರದು ಎಂದರೆ ಎಲ್ಲಿ ಹೋಗಬೇಕು ? ಬೆಂಗಳೂರಿನಲ್ಲಿ ಕಸ ಗುಡಿಸುವವರು ಕನ್ನಡೇತರರು….. ಹಿಜಾಬ್ ವಿವಾದ ಇದ್ದಕ್ಕಿದ್ದಂತೆ ರಾಜ್ಯ, ದೇಶದಲ್ಲಿ ಆರಂಭವಾಯಿತು. ಇವೆಲ್ಲವೂ ಸರ್ವಾಧಿಕಾರಿ ಶಕ್ತಿಗಳ ಮೊದಲ ಹೆಜ್ಜೆ. ಇವುಗಳನ್ನು ಬೆಳೆಯಲು ಬಿಡಬಾರದು ಎಂದು ಹೇಳಿದರು.