alex Certify ನಾನು ಸತ್ತ ಮೇಲೆ ವಿಮಾನ ಕಳಿಸಿದರೆ ಪ್ರಯೋಜನವಿಲ್ಲ; ಭಾರತೀಯ ರಾಯಭಾರ ಕಚೇರಿ ವಿರುದ್ಧ ಗಾಯಾಳು ಹರ್ಜೋತ್​ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಸತ್ತ ಮೇಲೆ ವಿಮಾನ ಕಳಿಸಿದರೆ ಪ್ರಯೋಜನವಿಲ್ಲ; ಭಾರತೀಯ ರಾಯಭಾರ ಕಚೇರಿ ವಿರುದ್ಧ ಗಾಯಾಳು ಹರ್ಜೋತ್​ ಆಕ್ರೋಶ

ಉಕ್ರೇನ್​ನಲ್ಲಿ ಗುಂಡಿನ ದಾಳಿಗೆ ಒಳಗಾಗಿರುವ ಭಾರತೀಯ ವಿದ್ಯಾರ್ಥಿ ಹರ್ಜೋತ್​ ಸಿಂಗ್​​ ತನಗೆ ಸಹಾಯ ಮಾಡುವಲ್ಲಿ ವಿಫಲವಾದ ಭಾರತೀಯ ರಾಯಭಾರ ಕಚೇರಿಯನ್ನು ನಿಂದಿಸುತ್ತಾ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಯುದ್ಧ ಪೀಡಿತ ಉಕ್ರೇನ್ ಕೈವ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರ್ಜೋತ್​ ಸಿಂಗ್​ ಭಾರತೀಯ ರಾಯಭಾರ ಕಚೇರಿಯು ಇನ್ನೂ ನನಗೆ ಯಾವುದೇ ರೀತಿಯ ಸಹಾಯವನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

ನಾನು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಯತ್ನಿಸುತ್ತಿದ್ದೇನೆ. ಅವರು ಪ್ರತಿದಿನ ನಾವು ಏನಾದರೂ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಏನೂ ಸಹಾಯ ಮಾಡಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಭಾರತೀಯ ವಿದ್ಯಾರ್ಥಿ ಹರ್ಜೋತ್​ ಸಿಂಗ್​ ಫೆಬ್ರವರಿ 27ರಂದು ಉಕ್ರೇನ್​ನಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದಾರೆ.

ನಾವು ಮೂರನೇ ಚೆಕ್‌ಪಾಯಿಂಟ್‌ಗೆ ಹೋಗುವ ದಾರಿಯಲ್ಲಿ ಮೂವರು ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದೆವು, ಅಲ್ಲಿ ಭದ್ರತಾ ಕಾರಣಗಳಿಂದ ಹಿಂತಿರುಗಲು ನಮಗೆ ತಿಳಿಸಲಾಯಿತು. ಹಿಂತಿರುಗುತ್ತಿರುವಾಗ, ನಮ್ಮ ಕಾರಿಗೆ ಹಲವಾರು ಗುಂಡುಗಳನ್ನು ಹಾರಿಸಲಾಯಿತು, ಇದರಲ್ಲಿ ನಾನು ಗಾಯಗೊಂಡಿದ್ದೇನೆ ಎಂದು ಹರ್ಜೋತ್​ ಹೇಳಿದ್ದಾರೆ.

— ANI (@ANI) March 4, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...