ಉಕ್ರೇನ್ನಲ್ಲಿ ಗುಂಡಿನ ದಾಳಿಗೆ ಒಳಗಾಗಿರುವ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ ತನಗೆ ಸಹಾಯ ಮಾಡುವಲ್ಲಿ ವಿಫಲವಾದ ಭಾರತೀಯ ರಾಯಭಾರ ಕಚೇರಿಯನ್ನು ನಿಂದಿಸುತ್ತಾ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಯುದ್ಧ ಪೀಡಿತ ಉಕ್ರೇನ್ ಕೈವ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರ್ಜೋತ್ ಸಿಂಗ್ ಭಾರತೀಯ ರಾಯಭಾರ ಕಚೇರಿಯು ಇನ್ನೂ ನನಗೆ ಯಾವುದೇ ರೀತಿಯ ಸಹಾಯವನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ನಾನು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಯತ್ನಿಸುತ್ತಿದ್ದೇನೆ. ಅವರು ಪ್ರತಿದಿನ ನಾವು ಏನಾದರೂ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಏನೂ ಸಹಾಯ ಮಾಡಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ ಫೆಬ್ರವರಿ 27ರಂದು ಉಕ್ರೇನ್ನಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದಾರೆ.
ನಾವು ಮೂರನೇ ಚೆಕ್‌ಪಾಯಿಂಟ್‌ಗೆ ಹೋಗುವ ದಾರಿಯಲ್ಲಿ ಮೂವರು ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದೆವು, ಅಲ್ಲಿ ಭದ್ರತಾ ಕಾರಣಗಳಿಂದ ಹಿಂತಿರುಗಲು ನಮಗೆ ತಿಳಿಸಲಾಯಿತು. ಹಿಂತಿರುಗುತ್ತಿರುವಾಗ, ನಮ್ಮ ಕಾರಿಗೆ ಹಲವಾರು ಗುಂಡುಗಳನ್ನು ಹಾರಿಸಲಾಯಿತು, ಇದರಲ್ಲಿ ನಾನು ಗಾಯಗೊಂಡಿದ್ದೇನೆ ಎಂದು ಹರ್ಜೋತ್ ಹೇಳಿದ್ದಾರೆ.