alex Certify ನವೆಂಬರ್ 4ರಂದು ತೆರೆ ಮೇಲೆ ಬರಲಿದೆ ಸಮಂತಾ ಅಭಿನಯದ ಶಾಕುಂತಲಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವೆಂಬರ್ 4ರಂದು ತೆರೆ ಮೇಲೆ ಬರಲಿದೆ ಸಮಂತಾ ಅಭಿನಯದ ಶಾಕುಂತಲಂ

ನಟಿ ಸಮಂತಾ ರುತ್ ಪ್ರಭು ಅವರ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋಧ’ ಶೂಟಿಂಗ್ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇದೀಗ ಅವರ ಮತ್ತೊಂದು ಚಿತ್ರ ಶಾಕುಂತಲಂ ಬಿಡುಗಡೆಗೆ ಸಿದ್ಧವಾಗಿದೆ.

ಗುಣಶೇಖರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಮುಂದಿನ ತಿಂಗಳು ನವೆಂಬರ್ 4ರಂದು ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಗುಣ ಟೀಮ್ ವರ್ಕ್ ಬ್ಯಾನರ್ ನಡಿ ನೀಲಿಮಾ ಗುಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಮಣಿ ಶರ್ಮ ಸಂಗೀತ ನೀಡಿದ್ದಾರೆ.

ಮೈಥಾಲಾಜಿಕಲ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಹಾಗೂ ದೇವ್ ಮೋಹನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು. ಪ್ರಕಾಶ್ ರಾಜ್, ಅದಿತಿ ಬಾಲನ್, ಗೌತಮಿ, ಕಬೀರ್ ಬೇಡಿ, ವರ್ಷಿಣಿ, ಹಾಗೂ ಮಧು ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...