alex Certify ನವಿಲು – ಮೇಕೆ ನಡುವೆ ಬಿಗ್ ಫೈಟ್..! ನೆಟ್ಟಿಗರನ್ನು ರಂಜಿಸಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವಿಲು – ಮೇಕೆ ನಡುವೆ ಬಿಗ್ ಫೈಟ್..! ನೆಟ್ಟಿಗರನ್ನು ರಂಜಿಸಿದೆ ಈ ವಿಡಿಯೋ

ಇಂಟರ್ನೆಟ್ ನಲ್ಲಿ ವೈರಲ್ ಆಗುವ ಪ್ರಾಣಿ-ಪಕ್ಷಿಗಳ ವಿಡಿಯೋ ನೋಡುವುದೇ ಅಂದ. ಪ್ರಾಣಿಗಳ ತಮಾಷೆಯ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರ ಮೊಗದಲ್ಲಿ ನಗುಮೂಡಿಸಿದ ವಿಡಿಯೋವೆಂದರೆ ನವಿಲು ಮತ್ತು ಮೇಕೆ ನಡುವಿನ ಮುಖಾಮುಖಿ.

ಹೌದು, ಪ್ರಾಣಿ ಮತ್ತು ಪಕ್ಷಿಗಳ ನಡುವಿನ ಕಾದಾಟ ನೋಡಲು ಬಹಳ ಆಸಕ್ತಿದಾಯಕವಾಗಿದೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ. ಒಂದು ಮೇಕೆ ಮತ್ತು ನವಿಲು ಕಾಡಿನಲ್ಲಿ ಮುಖಾಮುಖಿಯಾಗುತ್ತವೆ.

ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ನವಿಲು ಮೇಕೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಮೇಕೆ ಕೂಡ ತನ್ನ ಕೊಂಬುಗಳಿಂದ ಹಕ್ಕಿಯ ದಾಳಿಗೆ ಪ್ರತಿಕ್ರಿಯೆ ನೀಡುತ್ತದೆ.

ಈ ಮುದ್ದಾದ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಯಾವಾಗಲೂ ನಿಮ್ಮ ಶಕ್ತಿಯಲ್ಲಿ ವಿಶ್ವಾಸವಿಡಿ. ದೇವರು ಪ್ರತಿಯೊಬ್ಬರಿಗೂ ಹೋರಾಡುವ ಸಾಮರ್ಥ್ಯವನ್ನು ನೀಡಿದ್ದಾನೆ ಎಂದು ಶೀರ್ಷಿಕೆ ನೀಡಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.

— Dipanshu Kabra (@ipskabra) February 28, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...