
ಹೌದು, ಪ್ರಾಣಿ ಮತ್ತು ಪಕ್ಷಿಗಳ ನಡುವಿನ ಕಾದಾಟ ನೋಡಲು ಬಹಳ ಆಸಕ್ತಿದಾಯಕವಾಗಿದೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ. ಒಂದು ಮೇಕೆ ಮತ್ತು ನವಿಲು ಕಾಡಿನಲ್ಲಿ ಮುಖಾಮುಖಿಯಾಗುತ್ತವೆ.
ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ನವಿಲು ಮೇಕೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಮೇಕೆ ಕೂಡ ತನ್ನ ಕೊಂಬುಗಳಿಂದ ಹಕ್ಕಿಯ ದಾಳಿಗೆ ಪ್ರತಿಕ್ರಿಯೆ ನೀಡುತ್ತದೆ.
ಈ ಮುದ್ದಾದ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಯಾವಾಗಲೂ ನಿಮ್ಮ ಶಕ್ತಿಯಲ್ಲಿ ವಿಶ್ವಾಸವಿಡಿ. ದೇವರು ಪ್ರತಿಯೊಬ್ಬರಿಗೂ ಹೋರಾಡುವ ಸಾಮರ್ಥ್ಯವನ್ನು ನೀಡಿದ್ದಾನೆ ಎಂದು ಶೀರ್ಷಿಕೆ ನೀಡಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.