alex Certify ನವರಾತ್ರಿ ಎರಡನೇ ದಿನ ಭಕ್ತರಿಂದ ಬ್ರಹ್ಮಚಾರಿಣಿ ಆರಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿ ಎರಡನೇ ದಿನ ಭಕ್ತರಿಂದ ಬ್ರಹ್ಮಚಾರಿಣಿ ಆರಾಧನೆ

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ ಮಾಡಲಾಗುತ್ತದೆ. ತಾಯಿ ಬ್ರಹ್ಮಚಾರಿಣಿಯನ್ನು ತಪಸ್ಸು, ಶಕ್ತಿ, ತ್ಯಾಗ, ಸದ್ಗುಣ, ಸಂಯಮದ ಸಂಕೇತ. ಬ್ರಹ್ಮಚಾರಿಣಿ ಶತ್ರುಗಳನ್ನು ನಾಶಮಾಡುತ್ತಾಳೆ. ಮಂಗಳ ಗ್ರಹದ ದೋಷವನ್ನು ನಿವಾರಿಸುತ್ತಾಳೆ.

ಜಾತಕದಲ್ಲಿ ಮಂಗಳ ಗ್ರಹದ ದೋಷವಿದ್ರೆ ವ್ಯಕ್ತಿಯು ಕೋಪಗೊಳ್ಳುತ್ತಾನೆ. ಇದ್ರಿಂದ ಸಾಕಷ್ಟು ಸಂಕಷ್ಟಕ್ಕೊಳಗಾಗ್ತಾನೆ. ಭ್ರಷ್ಟನಾಗ್ತಾನೆ. ಸ್ನೇಹಿತರು ಮತ್ತು ಸಂಬಂಧಿಕರನ್ನು ಕಳೆದುಕೊಳ್ತಾನೆ. ಇಂಥ ಪರಿಸ್ಥಿತಿಯಲ್ಲಿ ತಾಯಿ ಬ್ರಹ್ಮಚಾರಿಣಿಯ ಪೂಜೆ ಮಾಡಿದ್ರೆ ಮಂಗಳ ಗ್ರಹ ದೋಷ ನಿವಾರಣೆಯಾಗುತ್ತದೆ.

ಮಂಗಳ ಗ್ರಹದ ದೋಷದಿಂದ ಕೆಲಸದಲ್ಲಿ ಕೂಡ ಅಡತಡೆಯಾಗುತ್ತದೆ. ಪದೇ ಪದೇ ಉದ್ಯೋಗ ಬದಲಾಯಿಸಬೇಕಾಗುತ್ತದೆ. ವ್ಯವಹಾರದಲ್ಲೂ ಮಂಗಳಗ್ರಹ ನಷ್ಟವುಂಟು ಮಾಡುತ್ತದೆ. ಶಿಕ್ಷಣದಲ್ಲಿಯೂ ಸಮಸ್ಯೆ ಎದುರಾಗುತ್ತದೆ. ವೃತ್ತಿ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ಈ ಎಲ್ಲ ಸಮಸ್ಯೆಗೆ ತಾಯಿ ಬ್ರಹ್ಮಚಾರಿಣಿ ಪರಿಹಾರವಾಗಬಲ್ಲಳು. ಆಕೆಯನ್ನು ಪೂಜಿಸುವುದರಿಂದ ಮಂಗಳ ಗ್ರಹ ದೋಷ ಕಡಿಮೆಯಾಗುತ್ತದೆ. ಬ್ರಹ್ಮಚಾರಿಣಿ ಪೂಜೆಯನ್ನು ನಿಯಮಬದ್ಧವಾಗಿ ಮಾಡಬೇಕು. ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ನವಾರ್ಣ ಮಂತ್ರವನ್ನು ಜಪಿಸಬೇಕು. ಶುದ್ಧ ಮನಸ್ಸಿನಿಂದ ಸ್ವಚ್ಛ ಜಾಗದಲ್ಲಿ ಕುಳಿತು ಈ ಮಂತ್ರ ಜಪಿಸಿದ್ರೆ ದೋಷ ನಿವಾರಣೆಯಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...