alex Certify ನವರಾತ್ರಿಯಲ್ಲಿ ಶುಭ ಫಲಕ್ಕೆ ಅವಶ್ಯವಾಗಿ ತನ್ನಿ ಈ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯಲ್ಲಿ ಶುಭ ಫಲಕ್ಕೆ ಅವಶ್ಯವಾಗಿ ತನ್ನಿ ಈ ವಸ್ತು

ನವರಾತ್ರಿ ಹಬ್ಬದಲ್ಲಿ ಬಹಳ ಶ್ರದ್ಧೆಯಿಂದ ದೇವಿಯ ಪೂಜೆಯನ್ನು ಮಾಡಲಾಗುತ್ತೆ. 9 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಅನೇಕ ಫಲ- ಪುಷ್ಪಗಳಿಂದ ದೇವಿಯ ಅಲಂಕಾರವನ್ನು ಮಾಡುವುದು ಸಂಪ್ರದಾಯದಲ್ಲಿದೆ. ಹಾಗೆಯೇ ಈ ಸಮಯದಲ್ಲಿ ಈ ಕೆಳಗಿನವುಗಳಲ್ಲಿ ಯಾವುದಾದರೂ ವಸ್ತುವನ್ನು ಮನೆಗೆ ತರುವುದರಿಂದ ಸಮಸ್ಯೆಗಳು ನೀಗುತ್ತವೆ ಮತ್ತು ಮನೆಯಲ್ಲಿ ಸುಖ, ಶಾಂತಿ ಹೆಚ್ಚುತ್ತದೆ.ತುಳಸಿ : ನವರಾತ್ರಿಯಲ್ಲಿ ಒಂದು ದಿನ ತುಳಸಿ ಗಿಡವನ್ನು ತಂದು ನೆಟ್ಟು ಅದಕ್ಕೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ಒಲಿಯುತ್ತಾಳೆ.

ಬಾಳೆಗಿಡ : ನವರಾತ್ರಿಯ ಶುಭದಿನದಂದು ಬಾಳೆಗಿಡವನ್ನು ನೆಟ್ಟು, 9 ದಿನಗಳ ತನಕ ಅದಕ್ಕೆ ನೀರುಣಿಸಿದರೆ ಒಳಿತಾಗುತ್ತದೆ. ನಂತರ ಪ್ರತೀ ಗುರುವಾರದಂದು ಅದಕ್ಕೆ ಹಾಲಿನ ಅಭಿಷೇಕ ಮಾಡಿದಲ್ಲಿ ಧನಪ್ರಾಪ್ತಿಯಾಗುತ್ತದೆ.

ಪಾರಿಜಾತ : ಯಾವುದಾದರೂ ಶುಭ ಮುಹೂರ್ತದಲ್ಲಿ ಪಾರಿಜಾತದ ಹೂವುಗಳನ್ನು ಕೆಂಪನೆಯ ಬಟ್ಟೆಯಲ್ಲಿ ಇಟ್ಟು ತಿಜೋರಿಯಲ್ಲಿ ಇಟ್ಟರೆ ಹಣದ ಸಮಸ್ಯೆಗಳು ದೂರವಾಗುತ್ತವೆ.

ಆಲದ ಎಲೆ : ಶುಭ ಘಳಿಗೆಯಲ್ಲಿ ಆಲದ ಎಲೆಯನ್ನು ತಂದು ಅದರ ಮೇಲೆ ಅರಿಸಿನದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಪೂಜೆಯ ಕೋಣೆಯಲ್ಲಿ ಇಟ್ಟರೆ ಕಾರ್ಯ ಸಿದ್ಧಿಯಾಗುತ್ತದೆ.

ದತ್ತೂರಿ ಗಿಡ : ಶಿವನಿಗೆ ಪ್ರಿಯವಾದ ದತ್ತೂರಿ ದೇವಿಗೂ ಪ್ರಿಯ. ಆದ್ದರಿಂದ ನವರಾತ್ರಿಯಲ್ಲಿ ದತ್ತೂರಿ ಗಿಡವನ್ನು ನೆಟ್ಟರೆ ಒಳಿತಾಗುತ್ತದೆ.

ಶಂಖಪುಷ್ಪ : ನವರಾತ್ರಿಯ ಶುಭಮುಹೂರ್ತದಲ್ಲಿ ಶಂಖಪುಷ್ಪದ ಗಿಡವನ್ನು ತಂದು ಬೆಳ್ಳಿಯ ಪಾತ್ರೆಯಲ್ಲಿ ಇಟ್ಟು ಅದನ್ನು ತಿಜೋರಿಯಲ್ಲಿ ಇಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...