
ಬಾಳೆಗಿಡ : ನವರಾತ್ರಿಯ ಶುಭದಿನದಂದು ಬಾಳೆಗಿಡವನ್ನು ನೆಟ್ಟು, 9 ದಿನಗಳ ತನಕ ಅದಕ್ಕೆ ನೀರುಣಿಸಿದರೆ ಒಳಿತಾಗುತ್ತದೆ. ನಂತರ ಪ್ರತೀ ಗುರುವಾರದಂದು ಅದಕ್ಕೆ ಹಾಲಿನ ಅಭಿಷೇಕ ಮಾಡಿದಲ್ಲಿ ಧನಪ್ರಾಪ್ತಿಯಾಗುತ್ತದೆ.
ಪಾರಿಜಾತ : ಯಾವುದಾದರೂ ಶುಭ ಮುಹೂರ್ತದಲ್ಲಿ ಪಾರಿಜಾತದ ಹೂವುಗಳನ್ನು ಕೆಂಪನೆಯ ಬಟ್ಟೆಯಲ್ಲಿ ಇಟ್ಟು ತಿಜೋರಿಯಲ್ಲಿ ಇಟ್ಟರೆ ಹಣದ ಸಮಸ್ಯೆಗಳು ದೂರವಾಗುತ್ತವೆ.
ಆಲದ ಎಲೆ : ಶುಭ ಘಳಿಗೆಯಲ್ಲಿ ಆಲದ ಎಲೆಯನ್ನು ತಂದು ಅದರ ಮೇಲೆ ಅರಿಸಿನದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಪೂಜೆಯ ಕೋಣೆಯಲ್ಲಿ ಇಟ್ಟರೆ ಕಾರ್ಯ ಸಿದ್ಧಿಯಾಗುತ್ತದೆ.
ದತ್ತೂರಿ ಗಿಡ : ಶಿವನಿಗೆ ಪ್ರಿಯವಾದ ದತ್ತೂರಿ ದೇವಿಗೂ ಪ್ರಿಯ. ಆದ್ದರಿಂದ ನವರಾತ್ರಿಯಲ್ಲಿ ದತ್ತೂರಿ ಗಿಡವನ್ನು ನೆಟ್ಟರೆ ಒಳಿತಾಗುತ್ತದೆ.
ಶಂಖಪುಷ್ಪ : ನವರಾತ್ರಿಯ ಶುಭಮುಹೂರ್ತದಲ್ಲಿ ಶಂಖಪುಷ್ಪದ ಗಿಡವನ್ನು ತಂದು ಬೆಳ್ಳಿಯ ಪಾತ್ರೆಯಲ್ಲಿ ಇಟ್ಟು ಅದನ್ನು ತಿಜೋರಿಯಲ್ಲಿ ಇಡಬೇಕು.