ನವರಾತ್ರಿ ನಡೆಯುತ್ತಿದೆ. ತಾಯಿ ದುರ್ಗೆಯ ಕೃಪೆಗಾಗಿ ಭಕ್ತರು ಉಪವಾಸ, ವೃತ, ಪೂಜೆ ಮಾಡ್ತಾರೆ. ಸತತ 9 ದಿನಗಳ ಕಾಲ ನವರಾತ್ರಿ ವೃತ, ಉಪವಾಸ ಮಾಡ್ಬೇಕು.
ಆದ್ರೆ ಕೆಲವೊಂದು ಸಂದರ್ಭದಲ್ಲಿ ಉಪವಾಸ ಮಾಡಲು ಸಾಧ್ಯವಾಗುವುದಿಲ್ಲ. ಉಪವಾಸ ವೃತವನ್ನು ಅರ್ಧಕ್ಕೆ ಬಿಡುವುದು ಪಾಪ. ಇಂಥ ಸಂದರ್ಭದಲ್ಲಿ ಭಕ್ತರು ದೋಷ ನಿವಾರಣೆಗೆ ಕೆಲ ಕೆಲಸ ಮಾಡಬೇಕಾಗುತ್ತದೆ.
ಒಂದು ವೇಳೆ ಉಪವಾಸ ಮಾಡಲು ಸಾಧ್ಯವಿಲ್ಲ ಅಥವಾ ನಿಮಗೆ ನೆನಪಿಲ್ಲದೆ ಆಹಾರ ಸೇವನೆ ಮಾಡಿದ್ದರೆ ನೀವು ಪೂಜೆ ವೇಳೆ ತಾಯಿಯ ಕ್ಷಮೆ ಕೇಳಿ.
ಬೆರಗು ಹುಟ್ಟಿಸುತ್ತವೆ ವಿಶಿಷ್ಟ ರೀತಿಯ ಈ ಗಗನಚುಂಬಿ ಕಟ್ಟಡಗಳು
ವೃತ ಅರ್ಧಕ್ಕೆ ಮುರಿದ್ರೆ ಯಾವ ದೇವರ ಹೆಸರಿನಲ್ಲಿ ವೃತ ಮಾಡ್ತಿದ್ದಿರೋ ಆ ದೇವರ ಹೆಸರಿನಲ್ಲಿ ಹೋಮ ಮಾಡಿಸಿ. ಹೋಮದ ಕೊನೆಯಲ್ಲಿ ಪ್ರಾರ್ಥನೆ ವೇಳೆ ವೃತ ಹಾಳಾಗಿತ್ತು. ಅದ್ರ ದೋಷಕ್ಕಾಗಿ ಹೋಮ ಮಾಡಲಾಗಿದೆ ಎಂದು ದೇವರ ಮುಂದೆ ಪ್ರಾರ್ಥಿಸಬೇಕು.
ಉಪವಾಸ ದೋಷ ನಿವಾರಣೆಗೆ ದೇವರ ಮೂರ್ತಿ ಮಾಡಿ ಅದಕ್ಕೆ ಪಂಚಾಮೃತ ಅಭಿಷೇಕ ಮಾಡಬೇಕು. ನಂತ್ರ ಅಕ್ಷತೆ, ಅರಿಶಿನ, ಕುಂಕುಮ ಹಾಕಿ ಪೂಜೆ ಮಾಡಬೇಕು.
ಉಪವಾಸ ವೃತ ಅರ್ಧಕ್ಕೆ ನಿಂತಲ್ಲಿ ಆ ದೇವರ ವಿಶೇಷ ಮಂತ್ರಗಳನ್ನು ಪಠಿಸಬೇಕು.
ಪಂಡಿತರನ್ನು ಕೇಳಿ, ದೋಷ ಪರಿಹಾರಕ್ಕೆ ದಾನ ಕೂಡ ಮಾಡಬಹುದು.