
ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು, ತಾಂಬೂಲ ಪ್ರಶ್ನೆ ಚಿಂತನೆ ಮೂಲಕ ಭವಿಷ್ಯವನ್ನು ಹೇಳುವ ಚಿಂತಕರಿಗೆ ಸವಾಲು ಎಸೆದಿದ್ದು ನಿಖರವಾಗಿ ಉತ್ತರಿಸುವವರಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ನರೇಂದ್ರ ನಾಯಕ್ ಅವರು ಈ ಸವಾಲನ್ನು ಹಾಕಿದ್ದು, 6 ಮುಚ್ಚಿರುವ ಪ್ರತ್ಯೇಕ ಲಕೋಟೆಗಳಲ್ಲಿ ಇರುವುದೇನು ಎಂಬುದನ್ನು ನಿಖರವಾಗಿ ಹೇಳುವವರಿಗೆ ಈ ಬಹುಮಾನ ಸಿಗಲಿದೆ ಎಂದಿದ್ದಾರೆ.
ಲಾಡ್ಜ್ ನಲ್ಲಿ ವೈದ್ಯನ ಹನಿಟ್ರ್ಯಾಪ್: ಸ್ನೇಹಿತ ಸೇರಿ ಮೂವರು ಸುಲಿಗೆಕೋರರು ಅರೆಸ್ಟ್
ಆಸಕ್ತರು ತಮ್ಮ ಉತ್ತರಗಳನ್ನು nareny-en@gmail.com ಅಥವಾ ವಾಟ್ಸಾಪ್ ಸಂಖ್ಯೆ 9448216343 ಗೆ ಮೇ 31ರೊಳಗೆ ಕಳುಹಿಸಬಹುದಾಗಿದ್ದು, ಜೂನ್ 1ರಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆರು ಲಕೋಟೆಗಳನ್ನು ತೆರೆಯಲಾಗುತ್ತದೆ.
ಇಮೇಲ್ ಅಥವಾ ವಾಟ್ಸಾಪ್ ಗೆ ಬಂದಿರುವ ಉತ್ತರಗಳನ್ನು ಇದಕ್ಕೆ ತಾಳೆ ಮಾಡಿ ನಿಖರ ಉತ್ತರ ನೀಡಿದವರಿಗೆ ತೆರಿಗೆ ಕಡಿತಗೊಳಿಸಿ ಒಂದು ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.