ಚಳಿಗಾಲ ಬಂತೆಂದರೆ ಸಾಕು, ಕಾಲು ಒಡೆಯುವುದು, ತುಟಿ ಒಡೆಯುವುದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ. ಚಳಿಗಾಲದಲ್ಲಿ ತುಟಿಯ ಆರೈಕೆ ಹೇಗೆ ಮಾಡಬೇಕು ಎಂಬುದರ ಕುರಿತು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್
* ಚಳಿಗಾಲದಲ್ಲಿ ಬಾಯಾರಿಕೆ ಅಷ್ಟಾಗಿ ಆಗುವುದಿಲ್ಲ. ಹಾಗಂತ ನೀರು ಕುಡಿಯುವುದನ್ನು ಮರೆಯಬೇಡಿ. ನೀರು ಕುಡಿದಷ್ಟು ನಿಮ್ಮ ತುಟಿಯ ಆರೋಗ್ಯ ಚೆನ್ನಾಗಿರುತ್ತದೆ.
* ವಿಟಮಿನ್ ಎ ಇರುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ತುಟಿ ಒಡೆಯುವುದನ್ನು ತಪ್ಪಿಸಬಹುದು.
* ರಾತ್ರಿ ಮಲಗುವಾಗ ತುಟಿಗೆ ರೋಸ್ ವಾಟರ್ ಅನ್ನು ಹಚ್ಚಿ ಮಲಗಿರಿ.
*ತುಪ್ಪ ಕೂಡ ಒಡೆದ ತುಟಿಗೆ ರಾಮಬಾಣ ಎನ್ನಬಹುದು. ರಾತ್ರಿ ಮಲಗುವಾಗ ಸ್ವಲ್ಪ ತುಪ್ಪವನ್ನು ನಿಮ್ಮ ತುಟಿಗೆ ಸವರಿಕೊಂಡು ಮಲಗಿ ಇದರಿಂದ ತುಟಿ ನಯವಾಗುತ್ತದೆ.
* ಒಂದಷ್ಟು ತಾಜಾ ಗುಲಾಬಿ ಹೂವಿನ ದಳಗಳನ್ನು ತೆಗೆದುಕೊಳ್ಳಿ. ಕಾಲು ಕಪ್ ಹಸಿ ಹಾಲು ತೆಗೆದುಕೊಂಡು ಈ ಗುಲಾಬಿ ಎಸಳುಗಳನ್ನು ಆ ಹಾಲಿನೊಂದಿಗೆ 3 ಗಂಟೆ ಹೊತ್ತು ನೆನೆಸಿಡಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಈ ಹಾಲನ್ನು ನಿಮ್ಮ ತುಟಿಗೆ ಸವರುತ್ತಾ ಇರಿ. ಇದರಿಂದ ತುಟಿಯ ಒಡೆತ ಕಡಿಮೆಯಾಗಿ ನಯವಾಗುತ್ತದೆ.