ಪಂಜಾಬಿ ನಟ ದೀಪ್ ಸಿಧು ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಹಿಂಪಡೆದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 38 ವರ್ಷದ ದೀಪ್ ಸಿಧು ಕಳೆದ ವರ್ಷ ನಡೆದ ಗಣರಾಜ್ಯೋತ್ಸವ ಹಿಂಸಾಚಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ದೀಪ್ ಸಿಧು ಜೊತೆಯಲ್ಲಿ ಅವರ ಪ್ರೇಯಸಿ ರೀನಾ ರೈ ಕೂಡ ಇದ್ದರು ಎಂದು ವರದಿಯಾಗಿದೆ. ಈ ಡೆಡ್ಲಿ ಅಪಘಾತಕ್ಕೂ ಕೇವಲ ಒಂದು ದಿನ ಮೊದಲು ಇಬ್ಬರು ಜೊತೆಯಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದರು. ರೀನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದ ಫೋಟೋವನ್ನು ಹಂಚಿಕೊಂಡಿದ್ದರು. ಅಪಘಾತಕ್ಕೂ ಮುನ್ನ ದೀಪ್ ಸಿಧು ಕ್ಲಿಕ್ಕಿಸಿಕೊಂಡ ಕೊನೆಯ ಫೋಟೋ ಇದಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ವೈರಲ್ ಆಗುತ್ತಿರುವ ಫೋಟೋದಲ್ಲಿ ದೀಪ್ ಹಾಗೂ ರೀನಾ ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಸೆಲ್ಫಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ರೀನಾ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಬರೆದುಕೊಂಡಿದ್ದರು.