alex Certify ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಆರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಆರೆಸ್ಟ್

ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಈಗ ವಂಚನೆ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾನೆ. ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ವೇಳೆ 2018ರಲ್ಲಿ ರವಿಶಂಕರ್ ಈ ವಂಚನೆ ಎಸಗಿದ್ದ ಎಂಬುದು ಪೊಲೀಸರ ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದೆ.

ಪ್ರಕರಣದ ವಿವರ: 2018 ರಲ್ಲಿ ಯೋಗೇಶ್ ಎಂಬವರು ತಮ್ಮ ಪತ್ನಿಗಾಗಿ ಅಜಯ್ ಎಂಬಾತನ ಮೂಲಕ ಕಾರನ್ನು ಖರೀದಿಸಿದ್ದು, ಇದಕ್ಕೆ ಜೀವಿತಾವಧಿ ತೆರಿಗೆ 1.37 ಲಕ್ಷ ರೂಪಾಯಿಗಳನ್ನು ಅಜಯ್ ಗೆ ನೀಡಿ ಪಾವತಿಸುವಂತೆ ತಿಳಿಸಿದ್ದರು. ಬಳಿಕ ತೆರಿಗೆ ಪಾವತಿಸಿರುವುದಾಗಿ ಹೇಳಿ ಇದಕ್ಕೆ ರಶೀದಿಗಳನ್ನು ಸಹ ಆತ ನೀಡಿದ್ದ ಎಂದು ಹೇಳಲಾಗಿದೆ.

ಆದರೆ ಯೋಗೇಶ್ ಅವರಿಗೆ ಇತ್ತೀಚೆಗೆ ಆರ್‌.ಟಿ.ಓ. ಕೇಂದ್ರ ಕಚೇರಿಯಿಂದ ನೋಟಿಸ್ ಬಂದಿದ್ದು, ತೆರಿಗೆ ಪಾವತಿಸುವಂತೆ ಸೂಚಿಸಲಾಗಿತ್ತು. ಆಗ ತಮಗೆ ಅಜಯ್ ನೀಡಿದ್ದ ರಶೀದಿ ನಕಲಿ ಎಂಬುದು ಯೋಗೇಶ್ ಅರಿವಿಗೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದರು.

ಯೋಗೇಶ್ ದೂರಿನ ಅನ್ವಯ ಅಜಯ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ವೇಳೆ ನಕಲಿ ರಶೀದಿ ಸೃಷ್ಟಿಸಲು ರವಿಶಂಕರ್ ಸಹಾಯ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಪೊಲೀಸರು ಭಾನುವಾರದಂದು ರವಿಶಂಕರ್ ನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...