alex Certify ನಟಿ ನೋರಾ ಫತೇಹಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರಾ….? ಗೊಂದಲಕ್ಕೊಳಗಾದ ಅಭಿಮಾನಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ನೋರಾ ಫತೇಹಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರಾ….? ಗೊಂದಲಕ್ಕೊಳಗಾದ ಅಭಿಮಾನಿಗಳು..!

ಬಾಲಿವುಡ್ ನಟಿ ನೋರಾ ಫತೇಹಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರಾ ? ಎಂದು ಅವರ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ನಟಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ ಫ್ಯಾನ್ಸ್ ಆಘಾತಕ್ಕೊಳಗಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನದಿಂದ ನಟಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಅಂದಿನಿಂದ ನೆಟ್ಟಿಗರು ಏನು ಕಾರಣವಿರಬಹುದು ಅಂತಾ ಆಶ್ಚರ್ಯ ಆಶ್ಚರ್ಯ ಪಡುತ್ತಿದ್ದಾರೆ. ಆದರೆ, ನಿಜವಾದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಬಹುಶಃ ತಾಂತ್ರಿಕ ದೋಷವಾಗಿರಬಹುದು ಅಥವಾ ನಟಿ ತನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಿರಬಹುದು ಅಥವಾ ಅಳಿಸಿರಬಹುದು. ನೋರಾ ಅವರ ಅಧಿಕೃತ ಪ್ರೊಫೈಲ್‌ಗೆ ಭೇಟಿ ನೀಡಿದ್ರೆ, ಕ್ಷಮಿಸಿ ಈ ಪುಟವು ಲಭ್ಯವಿಲ್ಲ ಎಂಬ ಸಂದೇಶ ಬರುತ್ತದೆ.

ನಟಿ ನೋರಾ ಫತೇಹಿ ಇನ್ಸ್ಟಾಗ್ರಾಂನ ಸಕ್ರಿಯ ಬಳಕೆದಾರರಾಗಿದ್ದರ ಜೊತೆಗೆ 37.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಅವರು ತಮ್ಮ ದುಬೈ ಪ್ರವಾಸದಿಂದ (ಗುರುವಾರ) ಕೊನೆಯ ಇನ್ಸ್ಟಾಗ್ರಾಂ ಪೋಸ್ಟ್ ಮಾಡಿದ್ದಾರೆ. ಅಲ್ಲಿನ ಖಾಸಗಿ ಮೃಗಾಲಯವೊಂದಕ್ಕೆ ಭೇಟಿ ನೀಡಿದ್ದ ಆಕೆ ಕತ್ತೆಕಿರುಬ, ಗೂಬೆ, ಸಿಂಹ ಮತ್ತು ಚಿಂಪಾಂಜಿ ಸೇರಿದಂತೆ ಪ್ರಾಣಿಗಳ ಹಲವು ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...