alex Certify ನಟಿ ಜಾಕ್ವೆಲಿನ್​ಗೆ ಮತ್ತೊಂದು ಸಂಕಷ್ಟ; ನಟಿ ನೋರಾ ಫತೇಹಿಯಿಂದಲೂ ಕೇಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಜಾಕ್ವೆಲಿನ್​ಗೆ ಮತ್ತೊಂದು ಸಂಕಷ್ಟ; ನಟಿ ನೋರಾ ಫತೇಹಿಯಿಂದಲೂ ಕೇಸ್…!

ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟಿನಲ್ಲಿ ಸಿಕ್ಕಿಬಿದ್ದಿರುವ ಖದೀಮ ಸುಕೇಶ್​ ಚಂದ್ರಶೇಖರ್​ನ ಸ್ನೇಹಿತೆ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಇದಾಗಲೇ ಸುಖೇಶನಿಂದ ಬಹುಕೋಟಿ ರೂಪಾಯಿ ಬೆಲೆಬಾಳುವ ಗಿಫ್ಟ್​ ಪಡೆದು ಸಂಕಷ್ಟಕ್ಕೆ ಸಿಲುಕಿರುವ ಜಾಕ್ವೆಲಿನ್​ ವಿರುದ್ಧ ಮತ್ತೊಬ್ಬ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾಳೆ.

ಬಹುಕೋಟಿ ಅಕ್ರಮ ಹಣ ವರ್ಗಾವಣೆ ವಿಷಯದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದಿದ್ದಾಳೆ ಎಂದು ನೋರಾ ದೂರು ದಾಖಲಿಸಿದ್ದಾರೆ.

ನೋರಾ ಮತ್ತು ಜಾಕ್ವೆಲಿನ್ ಇಬ್ಬರೂ ಸುಕೇಶ್ ಚಂದ್ರಶೇಖರ್​ನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಯಿಂದ ಹಲವು ಬಾರಿ ಪ್ರಶ್ನೆಗೆ ಒಳಗಾಗಿದ್ದಾರೆ. ಜಾಕ್ವೆಲಿನ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಪಿಯಾಗಿದ್ದರೆ, ನೋರಾ ಸಾಕ್ಷಿಯಾಗಿದ್ದಾರೆ.

ನೋರಾ ದೆಹಲಿಯ ಪಟಿಯಾಲ ಕೋರ್ಟ್‌ಗೆ ಸಲ್ಲಿಸಿದ ಮೊಕದ್ದಮೆಯಲ್ಲಿ ಉದ್ಯಮದ ಎಲ್ಲಾ ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ನನ್ನ ಹೆಸರನ್ನು ಕೆಡಿಸಲು ಹೆಸರನ್ನು ಈ ಪ್ರಕರಣದಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದ್ದಾಳೆ.

ಇನ್ನೊಂದೆಡೆ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಕೋರ್ಟ್​ ಒಂದು ವಾರಕ್ಕೆ ಮುಂದೂಡಿದೆ. ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರು ಚಾರ್ಜ್ ಶೀಟ್ ಮತ್ತು ಇತರ ದಾಖಲೆಗಳ ಸಂಪೂರ್ಣ ಪ್ರತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಸ್ವೀಕರಿಸಲು ಇನ್ನೂ ಫರ್ನಾಂಡೀಸ್ ಪರ ವಾದ ಮಂಡಿಸಿದ ವಕೀಲರು ತಿಳಿಸಿದ ನಂತರ ಪ್ರಕರಣವನ್ನು ಡಿಸೆಂಬರ್ 20 ಕ್ಕೆ ಮುಂದೂಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...