
ಈ ವಿಡಿಯೋದಲ್ಲಿ ನಟ ವಿಶ್ವಕ್ ಸೇನ್ ಆ್ಯಂಕರ್ ಬಳಿ, ನಿಮಗೆ ವೈಯಕ್ತಿಕವಾಗಿ ನನ್ನ ಮೇಲೆ ಆಕ್ರಮಣ ಮಾಡುವ ಹಕ್ಕಿಲ್ಲ. ನೀವು ನನ್ನನ್ನು ಖಿನ್ನತೆಗೆ ಒಳಗಾದ ವ್ಯಕ್ತಿ ಅಥವಾ ಪಾಗಲ್ ಸೇನ್ ಎಂದು ಕರೆಯಬೇಡಿ. ತಿಳಿಯಿತಾ..? ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಆ್ಯಂಕರ್, ನೀವು ನನ್ನ ಸ್ಟುಡಿಯೋದಿಂದ ಹೊರ ನಡೆಯಿರಿ ಎಂದು ಪದೇ ಪದೇ ಹೇಳಿದ್ದಾರೆ.
ಇದಕ್ಕೆ ಅವಾಚ್ಯ ಶಬ್ದ ಬಳಕೆ ಮಾಡಿದ ಸೇನ್ ನೀವೇ ತಾನೆ ನನ್ನನ್ನು ಕರೆಯಿಸಿದ್ದು ಎಂದು ಹೇಳಿದ್ದಾರೆ. ಹಾಗೂ ಇಯರ್ ಫೋನ್ಗಳನ್ನು ಕಳಚಿ ಕುರ್ಚಿಯಿಂದ ಕೆಳಗಿಳಿಯುವ ವೇಳೆಯಲ್ಲಿ ಆಕ್ರೋಶದಲ್ಲಿದ್ದ ನಿರೂಪಕಿಯು ಗೆಟ್ ಲಾಸ್ಟ್ ಎಂದು ಕಿರುಚಿದ್ದಾರೆ.
ಆದರೆ ನಿರೂಪಕಿ ವರ್ತಿಸಿದ ರೀತಿಯು ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ. ಆ್ಯಂಕರ್ ಅತಿಯಾದ ಸೊಕ್ಕನ್ನು ಹೊಂದಿದ್ದಾರೆ. ಇಂತಹ ವೃತ್ತಿಪರವಲ್ಲದ ಆ್ಯಂಕರ್ಗಳು ಪತ್ರಿಕೋದ್ಯಮಕ್ಕೆ ಒಂದು ಕಪ್ಪು ಚುಕ್ಕೆ ಎಂದು ನೆಟ್ಟಿಗರು ಅಭಿಪ್ರಾಯ ಹೊರ ಹಾಕಿದ್ದಾರೆ.
https://twitter.com/i/status/1521020738064371713