alex Certify ನಗ್ನ ಫೋಟೋ ಸೋರಿಕೆ‌ ವಿಚಾರಕ್ಕೆ ನಡು ರಸ್ತೆಯಲ್ಲೇ ಯುವತಿಯರಿಬ್ಬರ ಫೈಟ್; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗ್ನ ಫೋಟೋ ಸೋರಿಕೆ‌ ವಿಚಾರಕ್ಕೆ ನಡು ರಸ್ತೆಯಲ್ಲೇ ಯುವತಿಯರಿಬ್ಬರ ಫೈಟ್; ವಿಡಿಯೋ ವೈರಲ್

ನಗ್ನ ಛಾಯಾಚಿತ್ರಗಳು ಸೋರಿಕೆಯಾಗಿದೆ ಎಂಬ ಕಾರಣಕ್ಕೆ ಇಬ್ಬರು ಯುವತಿಯರು ಬೀದಿಯಲ್ಲಿ ಜಗಳವಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇಬ್ಬರ ಜಗಳವನ್ನು ಕಂಡ ಪ್ರತ್ಯಕ್ಷದರ್ಶಿಗಳು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇಬ್ಬರು ಯುವತಿಯರಲ್ಲಿ ಒಬ್ಬರಿಗೆ, ಅವರು ಏಕೆ ಜಗಳವಾಡುತ್ತಿದ್ದರು ಎಂದು ಕ್ಯಾಮೆರಾದ ಹಿಂದಿನ ವ್ಯಕ್ತಿ ಕೇಳುವುದರೊಂದಿಗೆ ಕ್ಲಿಪ್​ ಪ್ರಾರಂಭವಾಗುತ್ತದೆ. ವಿಡಿಯೋ ಆರಂಭಕ್ಕೆ ಮುನ್ನ ಇಬ್ಬರೂ ಒಬ್ಬರಿಗೊಬ್ಬರು ಕೊಟ್ಟುಕೊಂಡಿದ್ದರೆಂಬುದೂ ಸಹ ನಂತರ ಗೊತ್ತಾಗುತ್ತದೆ.

ಒಬ್ಬಾಕೆ ಮಾಸ್ಕ್​ ಹಾಕಿಕೊಂಡ ಕಾರಣಕ್ಕೆ ಆಕೆಯ ಮುಖ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಆಕೆ ತನ್ನ ನಗ್ನ ಚಿತ್ರಗಳನ್ನು ಬೇರೊಬ್ಬ ವ್ಯಕ್ತಿಗೆ ಕಳುಹಿಸಿದ್ದಾಳೆ ಎಂದು ಇನ್ನೊಬ್ಬಾಕೆ ಆರೋಪಿಸಿದ್ದಾಳೆ. ಆರೋಪ ಹೊತ್ತುಕೊಂಡ ಮಾಸ್ಕ್​ಧಾರಿ ಯುವತಿ ಇದರ ವಿರುದ್ಧ ಧ್ವನಿ ಎತ್ತಿದಾಗ, ತಾನು ಕೆಲವು ಆಡಿಯೋವನ್ನು ಪ್ರಸ್ತುತಪಡಿಸುತ್ತೇನೆ ಎಂದು ಹೇಳುತ್ತಾಳೆ.

ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ತಳ್ಳಾಡಿಕೊಂಡು ಹೊಡೆದುಕೊಳ್ಳುತ್ತಾರೆ. ಮಾಸ್ಕ್​ ಧರಿಸಿದ್ದ ಯುವತಿ ಆಟೋ ರಿಕ್ಷಾದಲ್ಲಿ ಹೊರಡಲು ಪ್ರಯತ್ನಿಸುತ್ತಿದ್ದಂತೆ, ಆಕೆಯನ್ನು ಹೊರಗೆಳೆದು ಮತ್ತೊಬ್ಬಾಕೆ ಹೊಡೆದಿದ್ದಾಳೆ. ನೌಟಂಕಿ ಮಾಡಬೇಡ, ಮನೆಗೆ ಹೋಗುವಂತೆ ಬೆದರಿಕೆಯನ್ನೂ ಹಾಕುತ್ತಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...