ಬೆಂಗಳೂರು: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್ ಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್ ನಿಂದ 42.91 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ ನಿರ್ದೇಶಕ ಕರಮಲ ಅವರಿಗೆ ಬಡ್ಡಿ ಕಟ್ಟುವಂತೆ ಸೂಚಿಸಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ಬ್ಯಾಂಕ್ ನವರು ಅಡವಿಟ್ಟ ಚಿನ್ನ ಹರಾಜು ಹಾಕುವುದಾಗಿ ಹೇಳಿ ನೋಟೀಸ್ ನೀಡಿದ್ದರು. ನೋಟೀಸ್ ಗೂ ನಿರ್ದೇಶಕರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಟಿ-20 ವಿಶ್ವಕಪ್: ಅಕ್ಟೋಬರ್ 24ರಂದು ಭಾರತ – ಪಾಕ್ ಮುಖಾಮುಖಿ
ಇದರಿಂದ ಅನುಮಾನಗೊಂಡು ಬ್ಯಾಂಕ್ ಸಿಬ್ಬಂದಿ ಚಿನ್ನವನ್ನು ಪರಿಶೀಲಿಸಿದ್ದರು. ಪರಿಶೀಲನೆ ವೇಳೆ ಅಡವಿಟ್ಟ ಚಿನ್ನವೆಲ್ಲವೂ ನಕಲಿ ಎಂಬುದು ಗೊತ್ತಾಗಿದೆ. ನಿರ್ದೇಶಕರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಪೊಲೀಸರು ಕರಮಲ ಬಾಲರವೀಂದ್ರನಾಥ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಕರಮಲ ಬಾಲರವೀಂದ್ರನಾಥ್, ಮಧುರ ಸ್ವಪ್ನ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.