alex Certify ಧೈರ್ಯವಂತರನ್ನೂ ಮೈ ಬೆವರುವಂತೆ ಮಾಡುತ್ತೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೈರ್ಯವಂತರನ್ನೂ ಮೈ ಬೆವರುವಂತೆ ಮಾಡುತ್ತೆ ಈ ವಿಡಿಯೋ…!

ಜಾಲತಾಣಗಳಲ್ಲಿ ವೈರಲ್‌ ಆಗಿರೋ ಈ ವಿಡಿಯೋ ನೋಡಿದ್ರೆ ಬಹಳ ಧೈರ್ಯವಂತರಿಗೂ ಮೈ ಬೆವರುವುದರಲ್ಲಿ ಅನುಮಾನವೇ ಇಲ್ಲ. ಮಲಗಿದ್ದಾಗ ನಮ್ಮ ಮೈಮೇಲೆ ನಾಗರಹಾವು ಬಂದು ವಿರಮಿಸಿದ್ರೆ ಹೇಗಿರತ್ತೆ ಹೇಳಿ ? ಅಂಥದ್ದೇ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಹೊಲದಲ್ಲಿ ಕೆಲಸ ಮುಗಿಸಿ ಮಂಚದ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ಲು. ಸ್ವಲ್ಪ ಸಮಯದ ನಂತರ ಅವಳ ಬೆನ್ನ ಮೇಲೆ ಹತ್ತಿ ಬಂದ ನಾಗರಹಾವು ಅಲ್ಲಿಯೇ ಹೆಡೆ ಬಿಚ್ಚಿ ಕುಳಿತಿದೆ. ಆಕೆಗೆ ಬೆನ್ನಿನ ಮೇಲೆ ತಣ್ಣಗಾದಂತೆ ಅನುಭವವಾಗಿತ್ತು. ನಾಗರಹಾವು ತನ್ನ ಮೈಮೇಲೆ ಇದೆ ಅನ್ನೋದು ಗಮನಕ್ಕೆ ಬರ್ತಿದ್ದಂತೆ ಆಕೆ ಬೆದರಿ ಚೀರಾಡಿ ಓಡಿ ಹೋಗಿಲ್ಲ.

ಸ್ವಲ್ಪವೂ ಅಲ್ಲಾಡದೆ ಮಲಗಿದ್ದಾಳೆ. ಮಹಿಳೆ ದೇವರ ನಾಮವನ್ನು ಜಪಿಸುತ್ತಾ, ತನ್ನನ್ನು ರಕ್ಷಿಸುವಂತೆ ಬೇಡಿಕೊಂಡಿದ್ದಾಳೆ. ನಾಗರಹಾವು ಸುಮಾರು ಒಂದು ಗಂಟೆ ಕಾಲ ಅವಳ ಬೆನ್ನಿನ ಮೇಲೆ ಕುಳಿತಿತ್ತು. ಆದ್ರೆ ಆಕೆಗೆ ಯಾವುದೇ ರೀತಿಯ ತೊಂದರೆ ಮಾಡದೇ ಹೊರಟು ಹೋಗಿದೆ.

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ. ನೆಟ್ಟಿಗರು ಇದೇ ರೀತಿಯ ಅನುಭವಗಳನ್ನು ಮತ್ತು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಮಹಿಳೆಯ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...