
ಶೂಟಿಂಗ್ ನಿಮಿತ್ತ ನಟ ಪುನೀತ್ ರಾಜ್ಕುಮಾರ್ ದೇಶ- ವಿದೇಶಗಳನ್ನು ಸುತ್ತಿದಂತವರು. ಅದೇ ರೀತಿ ಯುವರತ್ನ ಶೂಟಿಂಗ್ಗಾಗಿ ಧಾರವಾಡಕ್ಕೆ ಬಂದಿದ್ದ ಪುನೀತ್ ನುಗ್ಗಿಕೇರಿ ಗ್ರಾಮನದಲ್ಲಿನ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಯುವರತ್ನ ಶೂಟಿಂಗ್ಗೆ ಬಂದಿದ್ದ ವೇಳೆ ಮೊದಲ ಬಾರಿಗೆ ಈ ದೇಗುಲಕ್ಕೆ ಬಂದಿದ್ದ ಪುನೀತ್ ಬಳಿಕ ನುಗ್ಗಿಕೇರಿ ಆಂಜನೇಯನ ಭಕ್ತರಾಗಿದ್ದರು. ಉತ್ತರ ಕರ್ನಾಟಕಕ್ಕೆ ಬಂದಾಗಲೆಲ್ಲ ತಪ್ಪದೇ ಈ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ಕಳೆದ ಒಂದೂವರೆ ವರ್ಷಗಳಲ್ಲಿ ಮೂರು ಬಾರಿ ನುಗ್ಗಿಕೇರಿ ಹನುಮಂತನ ದೇಗುಲಕ್ಕೆ ಪುನೀತ್ ಭೇಟಿ ನೀಡಿದ್ದರಂತೆ.
ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣ ಪೂರೈಸಿದ್ದ ನಟ ಪುನೀತ್ ರಾಜ್ಕುಮಾರ್, ದ್ವಿತ್ವ ಸಿನಿಮಾದ ಮುಹೂರ್ತಕ್ಕೆ ಸಿದ್ಧತೆ ನಡೆಸಿದ್ದರು. ನಿನ್ನೆ ಸಂಗೀತ ನಿರ್ದೇಶಕ ಗುರುಕಿರಣ್ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪುನೀತ್ ಶುಭಾಶಯ ಕೋರಿದ್ದರು.
