alex Certify ದೈನಂದಿನ ಪ್ರಕರಣಗಳಲ್ಲಿ ಏರಿಕೆ ಹಿನ್ನೆಲೆ: ಬಾರ್​, ರೆಸ್ಟೋರೆಂಟ್​ಗಳನ್ನು ಬಂದ್​ ಮಾಡಲು ಮುಂದಾದ ದೆಹಲಿ ಸರ್ಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈನಂದಿನ ಪ್ರಕರಣಗಳಲ್ಲಿ ಏರಿಕೆ ಹಿನ್ನೆಲೆ: ಬಾರ್​, ರೆಸ್ಟೋರೆಂಟ್​ಗಳನ್ನು ಬಂದ್​ ಮಾಡಲು ಮುಂದಾದ ದೆಹಲಿ ಸರ್ಕಾರ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್​ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರ ಬೆನ್ನಲ್ಲೇ ದೆಹಲಿ ಸರ್ಕಾರವು ಎಲ್ಲಾ ಬಾರ್​ ಹಾಗೂ ರೆಸ್ಟೋರೆಂಟ್ ​ಗಳನ್ನು ಬಂದ್​ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ರೆಸ್ಟೋರೆಂಟ್ ​ಗಳಲ್ಲಿ ಕೇವಲ ಪಾರ್ಸೆಲ್​​ಗೆ ಮಾತ್ರ ಅವಕಾಶ ನೀಡುವ ಬಗ್ಗೆ ದೆಹಲಿ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೋವಿಡ್ ಪರಿಸ್ಥಿತಿ ಸಮಾಲೋಚನೆ ಹಾಗೂ ಸೋಂಕು ಹರಡುವಿಕೆ ತಡೆಯಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಜೊತೆಯಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿತು, ಈ ಸಭೆ ಮುಕ್ತಾಯದ ಬಳಿಕ ಈ ಸುದ್ದಿ ಉನ್ನತ ಮೂಲಗಳಿಂದ ಹೊರಬಿದ್ದಿದೆ ಎನ್ನಲಾಗಿದೆ.

ದೆಹಲಿಯಲ್ಲಿ ದೈನಂದಿನ ಕೋವಿಡ್​ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಹೆಚ್ಚಿನ ನಿಬಂಧನೆಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಭಾನುವಾರವಷ್ಟೇ ಈ ವಿಚಾರವಾಗಿ ಮಾತನಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಸದ್ಯಕ್ಕೆ ಲಾಕ್​ಡೌನ್​ ವಿಧಿಸುವ ಬಗ್ಗೆ ಯಾವುದೇ ಯೋಚನೆಗಳನ್ನು ಮಾಡಿಲ್ಲ. ಜನರು ಸರಿಯಾಗಿ ಮಾಸ್ಕ್ ಧರಿಸಿದರೆ ಲಾಕ್​ಡೌನ್​ ಅವಶ್ಯಕತೆ ಉದ್ಭವಿಸೋದೇ ಇಲ್ಲ ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...