alex Certify ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಗೆ ಮದ್ದು ʼಮೊಸರುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಗೆ ಮದ್ದು ʼಮೊಸರುʼ

ಹಲವರಿಗೆ ಊಟದ ನಂತರ ಮೊಸರು ಸೇವನೆ ಅಭ್ಯಾಸವಾಗಿಬಿಟ್ಟಿರುತ್ತದೆ. ಮೊಸರನ್ನ ತಿನ್ನದೆ ಇದ್ದರೆ ಅವರಿಗೆ ಊಟ ಸಂಪೂರ್ಣವಾಗುವುದಿಲ್ಲ, ಆರೋಗ್ಯ ದೃಷ್ಟಿಯಿಂದ ಮೊಸರು ತುಂಬಾ ಒಳ್ಳೆಯದು. ಅದರಲ್ಲೂ ಮನೆಯಲ್ಲಿಯೇ ಮೊಸರು ತಯಾರಿಸಿ ತಿನ್ನುವ ಅಭ್ಯಾಸ ಇದ್ದರೆ ಇಷ್ಟೊಂದು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೋಟಿನ್ ಹಾಗೂ ಘಟ್ ಬ್ಯಾಕ್ಟೀರಿಯಾ ಇರುತ್ತದೆ. ಅಷ್ಟೇ ಅಲ್ಲದೆ ಬೇರೆ ಆಹಾರಗಳಿಂದಲೂ ವಿಟಮಿನ್ಸ್ ಮತ್ತು ಮಿನರಲ್ಸ್ ಅನ್ನು ದೇಹ ಹೀರಿಕೊಳ್ಳಲು ಮೊಸರು ಬಹಳಷ್ಟು ಸಹಾಯ ಮಾಡುತ್ತದೆ.

ಗಟ್ಟಿ ಮೊಸರು ದೇಹಕ್ಕೆ ಉಷ್ಣವನ್ನು ಹೆಚ್ಚಿಸುತ್ತದೆ. ಆದರೆ ಮೊಸರನ್ನು ಮಜ್ಜಿಗೆ ಮಾಡಿ ಅಥವಾ ಸಕ್ಕರೆ ಬೆರೆಸಿ ಲಸ್ಸಿ ಮಾಡಿ ಕುಡಿದರೆ ದೇಹಕ್ಕೆ ತಂಪು, ಹೊಟ್ಟೆ ನೋವು, ಮಲ ವಿಸರ್ಜನೆಯಲ್ಲಿ ತೊಂದರೆ ಇದ್ದರೆ ಈ ವಿಧಾನವನ್ನು ಬಳಸಬಹುದು. ಬಿರಿಯಾನಿ ಅಥವಾ ಅದರಲ್ಲಿ ಬಳಸಿರುವ ಮಸಾಲೆ ಪದಾರ್ಥಗಳಿಂದ ಉಂಟಾಗುವ ಶಾಖವನ್ನು ಮೊಸರು ಕಡಿಮೆ ಮಾಡುತ್ತದೆ ಹಾಗೂ ಅಲ್ಸರ್ ನಂತಹ ಸಮಸ್ಯೆಗಳಿಗೂ ಇದು ಬಲು ಉಪಯೋಗ.

ಮೊಸರು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಲವು ಇನ್ಫೆಕ್ಷನ್ ಗಳಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಮೊಸರನ್ನು ಹೆಚ್ಚಾಗಿ ಬಳಸಬಹುದು.

ಮೊಸರು ಸೇವನೆ ದೇಹದ ಮೂಳೆಯನ್ನು ಗಟ್ಟಿ ಮಾಡಲು ಉಪಯೋಗಕಾರಿ. ಕಾರಣ ಇದರಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿರುತ್ತದೆ. ಇದರಿಂದ ದೇಹದ ಮೂಳೆಗಳು ಅಷ್ಟೇ ಅಲ್ಲದೆ ಹಲ್ಲುಗಳು ಗಟ್ಟಿಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮೂತ್ರಪಿಂಡಗಳ ಸಮಸ್ಯೆ ಇನ್ನು ಅನೇಕ ಕಾಯಿಲೆಗಳನ್ನು ಹೋಗಲಾಡಿಸುವ ಗುಣ ಮೊಸರಿನಲ್ಲಿ ಇದೆ. ಅತಿ ಮುಖ್ಯವಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬೆಳೆಯದಂತೆ ತಡೆಯುತ್ತದೆ, ದೇಹದ ತೂಕ ಹೆಚ್ಚಿನವರು ಅಥವಾ ದೇಹದ ತೂಕ ಹೆಚ್ಚಲು ಇಷ್ಟಪಡದಿದ್ದರೂ ತಮ್ಮ ದೈನಂದಿನ ಆಹಾರದಲ್ಲಿ ಮೊಸರನ್ನು ತಪ್ಪದೇ ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...