ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ಕಾನ್ಶಿಯಸ್ ಆಗುವ ಪರಿಸ್ಥಿತಿ. ಅದರಲ್ಲೂ ಕೋವಿಡ್ ನಂತರದ ದಿನಗಳಲ್ಲಿ ಸಾಮಾನ್ಯ ಜ್ವರ, ನೆಗಡಿ, ಕೆಮ್ಮು ಬಂದರೂ ಆತಂಕ ಪಡಬೇಕಾದ ಸಂದರ್ಭ. ಸ್ವಲ್ಪ ಆಯಾಸ, ಆರೋಗ್ಯ ಸಮಸ್ಯೆ ಬಂದರೂ ಕೂಡ ನಮ್ಮ ಇಮ್ಯೂನಿಟಿ ಕಡಿಮೆಯಿದೆಯೆನೋ ಎಂಬ ಅನುಮಾನ…… ಇಂತಹ ಗೊಂದಲ, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಡಾ.ರಾಜು.
ಹಲವರು ಇಮ್ಯೂನಿಟಿ ಸುಧಾರಿಸಲು ಇಮ್ಯೂನಿಟಿ ಬೂಸ್ಟರ್ ತೆಗೆದುಕೊಳ್ಳಿ…… ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ…… ಎಂಬ ತಪ್ಪು ಸಲಹೆಗಳನ್ನು ಕೊಡುತ್ತಾರೆ. ಇಂತಹ ತಪ್ಪು ತಿಳುವಳಿಕೆ, ಗೊಂದಲಗಳಿಗೆ ಡಾ. ರಾಜು ಸೂಕ್ತ ಉತ್ತರ ನೀಡಿದ್ದಾರೆ. ಹಾಗಾದರೆ ನಮ್ಮಲ್ಲಿ ಇಮ್ಯೂನಿಟಿ ಇದೆಯೇ ಎಂಬ ಬಗ್ಗೆ ನಾವು ತಿಳಿದುಕೊಳ್ಳುವುದು ಹೇಗೆ?
‘RRR’ ಪ್ರದರ್ಶನ ವೇಳೆ ತಾಂತ್ರಿಕ ದೋಷ, ಥಿಯೇಟರ್ ನಲ್ಲಿ ಅಭಿಮಾನಿಗಳ ಆಕ್ರೋಶ
ಇಮ್ಯೂನಿಟಿ ಪ್ರಕೃತಿಯಿಂದ ಸಿಗುವುದು. ಯಾವುದೇ ವ್ಯಕ್ತಿಯಲ್ಲಿ ಇಮ್ಯೂನಿಟಿ ಇಲ್ಲ ಎಂದು ಹೇಳಲಾಗಲ್ಲ, ಇಮ್ಯೂನಿಟಿ ಹೆಚ್ಚಾಗಿರಬಹುದು ಇಲ್ಲವೇ ಕಡಿಮೆಯಾಗಬಹುದು. ಇನ್ಫೆಕ್ಷನ್ ಆದ ಸಂದರ್ಭದಲ್ಲಿ ಅಥವಾ ಸಾಮಾನ್ಯ ಕೆಮ್ಮು, ಜ್ವರದಂತಹ ಸಮಸ್ಯೆ ಕಾಣಿಸಿಕೊಂಡಾಗ ಯಾವುದೇ ಮಾತ್ರೆ, ಔಷಧಿ ತೆಗೆದುಕೊಳ್ಳದೇ ಒಂದೇ ದಿನದಲ್ಲಿ ತಾನಾಗಿಯೇ ವಾಸಿಯಾದರೆ ನಿಮ್ಮಲ್ಲಿ ಅತ್ಯುತ್ತಮವಾದ ಇಮ್ಯೂನಿಟಿ ಇದೆ ಎಂದರ್ಥ.
ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಬಂದಾಗ ಮಾತ್ರೆ, ಔಷಧಿಯನ್ನು 2-3 ದಿನ ತೆಗೆದುಕೊಂಡರೆ ಜ್ವರ, ಕೆಮ್ಮು ಕಡಿಮೆಯಾದರೆ ನಿಮ್ಮಲ್ಲಿನ ಇಮ್ಯೂನಿಟಿ ಉತ್ತಮವಾಗಿದೆ ಎಂದರ್ಥ, ಒಂದು ವೇಳೆ ಸಾಮಾನ್ಯ ಗುಣಲಕ್ಷಣಗಳಿದ್ದಾಗ 6-7 ದಿನಗಳ ಕಾಲ ಔಷಧಿ, ಮಾತ್ರೆ ತೆಗೆದುಕೊಂಡರೆ ಜ್ವರ, ನೆಗಡಿ, ಕೆಮ್ಮು ವಾಸಿಯಾದರೆ ನಿಮ್ಮ ಇಮ್ಯೂನಿಟಿ ಸಾಮಾನ್ಯವಾಗಿದೆ ಎಂದರ್ಥ. ಒಂದೊಮ್ಮೆ ಔಷಧಿ ತೆಗೆದುಕೊಂಡ ನಂತರ 7 ದಿನಗಳಾದರೂ ಜ್ವರ ಕಡಿಮೆಯಾಗದೇ ಆಸ್ಪತ್ರೆಗೆ ಅಡ್ಮಿಟ್ ಆಗುವ ಸ್ಥಿತಿ ಬಂದರೆ ನಿಮ್ಮಲ್ಲಿ ಇಮ್ಯೂನಿಟಿ ಕಡಿಮೆಯಾಗಿದೆ ಎಂದು ಅರ್ಥ ಎಂದು ವಿವರಿಸಿದ್ದಾರೆ.