alex Certify ದೇಶದಲ್ಲಿ ಓಮಿಕ್ರಾನ್‌ ಗೆ​ ಮೊದಲ ಬಲಿ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ಓಮಿಕ್ರಾನ್‌ ಗೆ​ ಮೊದಲ ಬಲಿ..?

ಮಹಾರಾಷ್ಟ್ರದ ಪಿಂಪ್ರಿ ಜಿಲ್ಲೆಯಲ್ಲಿ ಕೊರೊನಾ ವೈರಸ್​ನ ಹೊಸ ರೂಪಾಂತರಿ ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದ 52 ವರ್ಷದ ವ್ಯಕ್ತಿಯೊಬ್ಬರು ಕಾರ್ಡಿಯಾಕ್​ ಅರೆಸ್ಟ್​ನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭಾರತವು ತನ್ನ ಮೊದಲ ಓಮಿಕ್ರಾನ್​ ಸಾವನ್ನು ದಾಖಲಿಸಿದೆ.

ಆದರೆ ಈ ವ್ಯಕ್ತಿಯು ತನ್ನ ಬೇರೆಯ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಇದನ್ನು ಓಮಿಕ್ರಾನ್​ ರೂಪಾಂತರಿಯ ಮೊದಲ ಸಾವು ಎಂದು ಘೋಷಣೆ ಮಾಡದೇ ಇರಲು ನಿರ್ಧರಿಸಲಾಗಿದೆ.

ಮೃತ ವ್ಯಕ್ತಿಯು ಅನೇಕ ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ನೈಜೀರಿಯಾದಿಂದ ಮಹಾರಾಷ್ಟ್ರಕ್ಕೆ ಆಗಮಿಸಿದ್ದರು. ಮಂಗಳವಾರ ಪಿಂಪ್ರಿಯ ಚಿಂಚ್ವಾಡ್​ನಲ್ಲಿರುವ ವೈಬಿ ಚವಾಣ್​ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ ಓಮಿಕ್ರಾನ್​ ಸೋಂಕು ತಗುಲಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸತತ ಎರಡನೇ ದಿನವೂ ಓಮಿಕ್ರಾನ್​ ಹಾಗೂ ಕೋವಿಡ್​ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದೇ ಕಾರಣಕ್ಕೆ ವಾಣಿಜ್ಯ ನಗರಿ ಮುಂಬೈನಲ್ಲಿ ಜನವರಿ 7ನೇ ತಾರೀಖಿನವರೆಗೆ ಸೆಕ್ಷನ್​ 144 ಜಾರಿಯಲ್ಲಿದೆ.

ದೇಶದಲ್ಲಿ ಓಮಿಕ್ರಾನ್​ ರೂಪಾಂತರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 450 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಇದ್ದು ಇಲ್ಲಿ 320 ಪ್ರಕರಣಗಳು ವರದಿಯಾಗಿದೆ. ಗುಜರಾತ್​​ನಲ್ಲಿ 97, ತೆಲಂಗಾಣ 62, ಆಂಧ್ರ ಪ್ರದೇಶದಲ್ಲಿ 16, ಹರಿಯಾಣ ಹಾಗೂ ಓಡಿಶಾಗಳಲ್ಲಿ ತಲಾ 14 ಮತ್ತು ಪಶ್ಚಿಮ ಬಂಗಾಳದಲ್ಲಿ 11 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...