ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ.
ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಪೂಜೆ ಮಾಡುವ ಥಾಲಿಗೆ ಹಣವನ್ನು ಹಾಕಲಾಗುತ್ತದೆ. ದೇವಸ್ಥಾನ ಅಥವಾ ಮನೆಯ ಪೂಜೆ ಥಾಲಿಗೆ ಹಾಕುವ ಹಣದ ಬಗ್ಗೆಯೂ ಶಾಸ್ತ್ರದಲ್ಲಿ ಹೇಳಲಾಗಿದೆ. ಪೂಜೆ ವೇಳೆ ದೇವರಿಗೆ ಅರ್ಪಿಸುವ ಈ ಹಣದ ಬಗ್ಗೆ ಕೆಲವೊಂದು ಎಚ್ಚರಿಕೆ ವಹಿಸಬೇಕಾಗುತ್ತದೆ.
ನವರಾತ್ರಿಯಂದು ರಹಸ್ಯ ದುರ್ಗಾ ಮಂತ್ರ ಹಂಚಿಕೊಂಡ ನಟಿ
ತಪ್ಪು ವಿಧಾನದಲ್ಲಿ ಹಣವನ್ನು ದೇವರಿಗೆ ಹಾಕಿದ್ರೆ ಶ್ರೀಮಂತರಾಗುವ ಬದಲು ಬಡತನ ನಿಮ್ಮನ್ನು ಆವರಿಸುತ್ತದೆ. ದೇವರಿಗೆ ಹಣವನ್ನು ಹಾಕುವ ವೇಳೆ ಗೌರವಪೂರ್ವಕವಾಗಿ ಹಾಕಿ. ಇಲ್ಲವೆ ದೇವರ ಮುಂದೆ ನಾಣ್ಯವನ್ನು ಚೆಲ್ಲಿ. ಕೆಲವರು ದೇವಸ್ಥಾನಕ್ಕೆ ಹೋಗಿ ಜೇಬಿನಿಂದ ನಾಣ್ಯ ತೆಗೆದು ಭಗವಂತನಿಗೆ ಭಿಕ್ಷೆ ನೀಡುತ್ತಿದ್ದೇವೆ ಎನ್ನುವ ರೀತಿಯಲ್ಲಿ ನಾಣ್ಯವನ್ನು ಹಾಕುತ್ತಾರೆ. ಇದು ತಪ್ಪು. ಇದ್ರಿಂದ ಮುಂದೆ ಸಾಕಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿರುತ್ತದೆ.
ಭಗವಂತನಿಗೆ ಹಣ ಹಾಕುವಾಗ ಲೆಕ್ಕಾಚಾರ ಮಾಡಬಾರದು. ಕೈಲಾದಷ್ಟು ಹಣವನ್ನು ಶ್ರದ್ಧೆಯಿಂದ ಅರ್ಪಿಸಬೇಕು. ಇಷ್ಟು ಹಣ ಹಾಕಿದೆ ಎನ್ನುವ ಅಹಂ ಕೂಡ ಬೇಡ. ಪ್ರಾರ್ಥನೆಯೊಂದಿಗೆ ಶ್ರದ್ಧೆಯಿಂದ ಹಣವನ್ನು ಹುಂಡಿಗೆ ಹಾಕಿದ್ರೆ ಎಲ್ಲ ಆಸೆಗಳು ಈಡೇರಿ, ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.