alex Certify ದೇವರ ನೈವೇದ್ಯಕ್ಕೆ ಪರಮಾನ್ನ ತಯಾರಿಸುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರ ನೈವೇದ್ಯಕ್ಕೆ ಪರಮಾನ್ನ ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು:

ಅಕ್ಕಿ – 1 ಕಪ್, ನೀರು – 4 ಕಪ್, ಬೆಲ್ಲ – 2 ಕಪ್, ಗೋಡಂಬಿ, ದ್ರಾಕ್ಷಿ

ಮಾಡುವ ವಿಧಾನ: ಕುಕ್ಕರ್ ನಲ್ಲಿ 1 ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು ಹಾಕಿ. ಇದಕ್ಕೆ 4 ಕಪ್ ನಷ್ಟು ನೀರು ಸೇರಿಸಿ. ಕುಕ್ಕರ್ ನಲ್ಲಿ 4 ವಿಸಿಲ್ ಬಂದ ಮೇಲೆ ಸ್ಟೌ ಆಫ್ ಮಾಡಿ. ಇನ್ನೊಂದು ಬಾಣಲೆಯಲ್ಲಿ 2 ಕಪ್ ಬೆಲ್ಲ ತೆಗೆದುಕೊಳ್ಳಿ. ಇದಕ್ಕೆ ಒಂದು ಕಪ್ ನೀರು ಹಾಕಿ.

ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ

ಮಧ್ಯಮ ಉರಿಯಲ್ಲಿಟ್ಟು ಬೆಲ್ಲವನ್ನು ಚೆನ್ನಾಗಿ ಕರಗಿಸಿ, ಅಂಟು ಬರಿಸಬೇಡಿ. ಬಳಿಕ ಇನ್ನೊಂದು ಪಾತ್ರೆಗೆ ಬೆಲ್ಲ ಸೋಸಿಕೊಳ್ಳಿ. ಬೆಲ್ಲದ ಹಸಿ ವಾಸನೆ ಹೋಗುವ ತನಕ ಕುದಿಸಿಕೊಳ್ಳಬೇಕು. ಬೆಲ್ಲ ಚೆನ್ನಾಗಿ ಕುದಿದಾಗ ಅನ್ನ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಚೆನ್ನಾಗಿ ಕುದಿಸಿಕೊಳ್ಳಿ. ಬೇಕಿದ್ದರೆ ಹಾಲು ಸೇರಿಸಬಹುದು, ರುಚಿ ಇನ್ನೂ ಹೆಚ್ಚಾಗುತ್ತದೆ. ಚೆನ್ನಾಗಿ ಕುದಿದು ಗಟ್ಟಿಯಾದ ಬಳಿಕ ದ್ರಾಕ್ಷಿ , ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಪರಮಾನ್ನಕ್ಕೆ ಮಿಕ್ಸ್ ಮಾಡಿಕೊಂಡರೆ ದೇವರ ನೈವೇದ್ಯಕ್ಕೆ ಪರಮಾನ್ನ ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...