ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ಈ ದೇವರ ಕೋಣೆಯಲ್ಲಿ ನಿಯಮದ ಪ್ರಕಾರ ಪೂಜೆ ಪುನಸ್ಕಾರಗಳನ್ನು ಮಾಡಿದರೆ ಮನೆಗೆ ಒಳ್ಳೆದಾಗುತ್ತದೆ. ಹಾಗೇ ಅಲ್ಲಿ ವಸ್ತುಗಳನ್ನು ಇಡುವಾಗ ಇಡಬಹುದೇ..? ಬೇಡವೇ….? ಎಂಬುದನ್ನು ಸಹ ತಿಳಿದುಕೊಂಡಿರಬೇಕು. ಇಲ್ಲವಾದರೆ ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆ.
ದೇವರ ಕೋಣೆಯಲ್ಲಿ ದೇವರ ಪೂಜೆಗೆ ಬಳಸಿದಂತಹ ಹೂಗಳನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ಇಡಬಾರದು. ಇದರಿಂದ ದೋಷಗಳು ಸುತ್ತಿಕೊಳ್ಳುತ್ತದೆ.
ಹಾಗೇ ದೇವರ ವಿಗ್ರಹಗಳನ್ನು ಇಟ್ಟರೆ ಅದಕ್ಕೆ ಅಭಿಷೇಕ ಮಾಡಬೇಕು. ಇಲ್ಲವಾದೆ ದಾರಿದ್ರ್ಯ ಕಾಡುತ್ತದೆ. ಹಾಗಾಗಿ ದೇವರ ಫೋಟೊಗಳನ್ನು ಬಳಸಿ.
ದೇವರ ಕೋಣೆಯಲ್ಲಿ ಉಗ್ರ ಸ್ವರೂಪದ ದೇವ ಫೋಟೊಗಳನ್ನು ಇಡಬಾರದು. ಶಾಂತ ಚಿತ್ತದಲ್ಲಿರುವ ದೇವರ ಫೋಟೊಗಳನ್ನು ಬಳಸಿ.