alex Certify ದೇವತೆಗಳು ಕೋಪಗೊಳ್ಳಲು ಇದೂ ಕೂಡ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವತೆಗಳು ಕೋಪಗೊಳ್ಳಲು ಇದೂ ಕೂಡ ಕಾರಣ

ಮನೆ ಪರಿಮಳಯುಕ್ತವಾಗಿದ್ದರೆ ಧನಾತ್ಮಕ ಶಕ್ತಿ ಮನೆಯಲ್ಲಿ ಸದಾ ನೆಲೆಸಿರುತ್ತದೆ. ಅಡುಗೆ ಮನೆ, ಮಲಗುವ ಕೋಣೆ, ಹೊರ ಕೋಣೆಯೆಲ್ಲ ಸುವಾಸನೆಯುಕ್ತವಾಗಿರುವಂತೆ ನೋಡಿಕೊಳ್ಳಿ. ಇದಕ್ಕಾಗಿ ನೀವು ಅಗರಬತ್ತಿ, ಧೂಪ, ಸುಗಂಧ ದ್ರವ್ಯವನ್ನು ಬಳಸಬಹುದು. ಯಾವುದೋ ಕಾರಣಕ್ಕೆ ನಿಮ್ಮ ಮನೆ ವಾಸನೆ ಹೊಡೆಯುತ್ತಿದ್ದರೆ ತಕ್ಷಣ ಮನೆಯ ವಾತಾವರಣವನ್ನು ಬದಲಾಯಿಸಿ.

ಶಾಸ್ತ್ರದ ಪ್ರಕಾರ, ಯಾರ ಮನೆಯಲ್ಲಿ ವಾಸನೆ, ಕೊಳಕಿರುತ್ತದೆಯೋ ಆ ಮನೆಯಲ್ಲಿ ಎಂದೂ ಲಕ್ಷ್ಮಿ ಸೇರಿದಂತೆ ಯಾವುದೇ ದೇವಾನುದೇವತೆಗಳು ವಾಸ ಮಾಡುವುದಿಲ್ಲ. ಕೆಟ್ಟ ವಾಸನೆ ಇರುವ ಮನೆಯಲ್ಲಿ, ಬಡತನ, ಅಶಾಂತಿ ಸದಾ ನೆಲೆಸಿರುತ್ತದೆ. ಹಾಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

ಪರಿಮಳ ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಮನಸ್ಸು ಶಾಂತವಾಗಿರಲು ನೆರವಾಗುತ್ತದೆ. ಆದ್ರೆ ಎಲ್ಲ ಸಮಯದಲ್ಲಿಯೂ ಎಲ್ಲ ರೀತಿಯ ಸುಗಂಧ ಬಳಸುವುದು ಒಳ್ಳೆಯದಲ್ಲ.

ಮಲ್ಲಿಗೆ ವಾಸನೆ ಬರುವ ಸುಗಂಧವನ್ನು ಕೇವಲ ಮದುವೆಯಾದವರು ಮಾತ್ರ ಬಳಸಬೇಕು.

ಮನಸ್ಸಿನ ಶಾಂತಿಗಾಗಿ ರಾತ್ರಿ ರಾಣಿ ಗಿಡ ಬೆಡ್ ರೂಂ ಹೊರಗಿರಲಿ. ಇಲ್ಲವೆ ಈ ಹೂವನ್ನು ಬೆಡ್ ರೂಂನಲ್ಲಿ ತಂದಿಡಿ.

ವಿದ್ಯಾರ್ಥಿಗಳು ಗುಲಾಬಿ ಪರಿಮಳವಿರುವ ಸುಗಂಧವನ್ನು ಬಳಸಬಾರದು. ಇದು ಮನಸ್ಸನ್ನು ಚಂಚಲಗೊಳಿಸುತ್ತದೆ.

ಮಲಗುವ ಮೊದಲು ತುಪ್ಪದಲ್ಲಿ ಕರ್ಪೂರ ಹಚ್ಚುವುದರಿಂದ ಸುಖಕರ ನಿದ್ರೆ ನಿಮ್ಮದಾಗುತ್ತದೆ.

ಮನೆಯಲ್ಲಿ ಗಲಾಟೆಯಾಗ್ತಿದ್ದರೆ ದೇವರ ಮನೆಯಲ್ಲಿ ತುಪ್ಪದ ದೀಪ ಹಚ್ಚಿ. ಕರ್ಪೂರದ ಪರಿಮಳ ಮನೆಯನ್ನು ಆವರಿಸಿರಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...