alex Certify ದೇಗುಲದಲ್ಲಿ ಕಳವು ಮಾಡುವ ಮುನ್ನ ಕೈಮುಗಿದು ದೇವರ ಆಶೀರ್ವಾದ ಬೇಡಿದ ಕಳ್ಳ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಗುಲದಲ್ಲಿ ಕಳವು ಮಾಡುವ ಮುನ್ನ ಕೈಮುಗಿದು ದೇವರ ಆಶೀರ್ವಾದ ಬೇಡಿದ ಕಳ್ಳ….!

ಕಳ್ಳನೊಬ್ಬ ತಾನು ದೇವಾಲಯದಲ್ಲಿ ಕಳವು ಮಾಡುವ ಮುನ್ನ ದೇವಿಗೆ ಕೈಮುಗಿದು ಆಶೀರ್ವಾದ ಬೇಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಫುಲ್ ವೈರಲ್ ಆಗಿದೆ. ಇಂಥದೊಂದು ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

ವಿಡಿಯೋದಲ್ಲಿ ಕಾಣುವಂತೆ ಶರ್ಟ್ ಧರಿಸದೆ ಬರಿ ಮೈಯಲ್ಲಿ ಇದ್ದ ಈ ಕಳ್ಳ ಮುಖಕ್ಕೆ ಮುಸುಕು ಹಾಕಿಕೊಂಡಿದ್ದು, ದೇಗುಲ ಪ್ರವೇಶಿಸುತ್ತಿದ್ದಂತೆ ದೇವಿಗೆ ಕೈಮುಗಿದು ಆಶೀರ್ವಾದ ಬೇಡಿದ್ದಾನೆ. ಬಳಿಕ ಮೂರು ಹುಂಡಿ ಪೆಟ್ಟಿಗೆಗಳನ್ನು ಎತ್ತಿಕೊಂಡಿದ್ದಾನೆ.

ಅಷ್ಟೇ ಅಲ್ಲ, ದೇವರಿಗೆ ಭಕ್ತರು ಅರ್ಪಿಸಿದ ಕಾಣಿಕೆ, ಎರಡು ದೊಡ್ಡ ಗಂಟೆಗಳು ಮೊದಲಾದವುಗಳನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...