alex Certify ದುಬಾರಿ ಕಾರು, ಕೋಟಿ ಕೋಟಿ ಬೆಲೆಬಾಳುವ ಮನೆ, ಅಪಾರ ಆಸ್ತಿಗೆ ಒಡೆಯ ಈ ಬಾಲಿವುಡ್‌ ಸೂಪರ್‌ ಸ್ಟಾರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಕಾರು, ಕೋಟಿ ಕೋಟಿ ಬೆಲೆಬಾಳುವ ಮನೆ, ಅಪಾರ ಆಸ್ತಿಗೆ ಒಡೆಯ ಈ ಬಾಲಿವುಡ್‌ ಸೂಪರ್‌ ಸ್ಟಾರ್‌

ಅಮೀರ್‌ ಖಾನ್‌ ಬಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರು. 1988ರಲ್ಲಿ ಖಯಾಮತ್‌ ಸೆ ಖಯಾಮತ್‌ ಸಿನೆಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್‌ ಖಾನ್‌, 3 ಈಡಿಯಟ್ಸ್‌, ಪಿಕೆ, ದಂಗಲ್‌ನಂತಹ ಸೂಪರ್‌ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿನಿ ಜಗತ್ತಿನ ಇತರ ಸೂಪರ್‌ ಸ್ಟಾರ್‌ಗಳಂತೆ ಅಮೀರ್‌ ಖಾನ್‌ ಕೂಡ ಐಷಾರಾಮಿ ವಸ್ತುಗಳಿಗೆ ಒಡೆಯರಾಗಿದ್ದಾರೆ. ದುಬಾರಿ ಅಪಾರ್ಟ್ಮೆಂಟ್‌ಗಳು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಾರುಗಳು ಅಮೀರ್‌ ಬಳಿ ಇವೆ.

ರೋಲ್ಸ್‌ ರಾಯ್ಸ್‌ ಘೋಸ್ಟ್‌ ಅಮೀರ್‌ ಖಾನ್‌ರ ನೆಚ್ಚಿನ ಕಾರುಗಳಲ್ಲೊಂದು. 6.83 ಕೋಟಿ ರೂಪಾಯಿ ಬೆಲೆಬಾಳುವ ಕಾರು ಅಮೀರ್‌ ಬಳಿ ಇದೆ.

ಬೆಂಟ್ಲಿ ಕಾಂಟಿನೆಂಟಲ್‌ ಫ್ಲೈಯಿಂಗ್‌ ಸ್ಪರ್‌ ಕಾರನ್ನೂ ಅಮೀರ್‌ ಖರೀದಿಸಿದ್ದಾರೆ. ಈ ಕಾರಿನ ಬೆಲೆ 3.4 ಕೋಟಿ ರೂಪಾಯಿ. ಇದಕ್ಕೆ 0007 ಎಂಬ ವಿಶಿಷ್ಟ ನಂಬರ್‌ ಸಹ ಪಡೆದಿದ್ದಾರೆ ಅಮೀರ್‌.

2013ರಲ್ಲಿ ಅಮೀರ್‌ ಖಾನ್‌, ಪಂಚಗನಿಯಲ್ಲಿ ಸುಮಾರು 15 ಕೋಟಿ ರೂಪಾಯಿ ಬೆಲೆಬಾಳುವ ಎರಡು ಎಕರೆ ಭೂಮಿಯನ್ನು ಕೊಂಡುಕೊಂಡಿದ್ದಾರೆ. ಬ್ರೇವರಿ ಹಿಲ್ಸ್‌ನಲ್ಲಿ ಅಮೀರ್‌ ಒಡೆತನದ 75 ಕೋಟಿ ಮೌಲ್ಯದ ಆಸ್ತಿಯೂ ಇದೆ.

ಮುಂಬೈನಲ್ಲಿ ಅಮೀರ್‌ ಖಾನ್‌ ದುಬಾರಿ ಅಪಾರ್ಟ್ಮೆಂಟ್‌ ಖರೀದಿಸಿದ್ದಾರೆ. 5000 ಚದರ ಅಡಿ ವಿಸ್ತಾರವಾದ ಈ ಮನೆ ಮುಂಬೈನ ಬಾಂದ್ರಾದಲ್ಲಿದೆ. ಇದರ ಬೆಲೆ ಸುಮಾರು 60 ಕೋಟಿ ರೂಪಾಯಿ ಅಂತಾ ಅಂದಾಜಿಸಲಾಗಿದೆ.

ಬೆಂಗಳೂರು ಮೂಲದ ಕಂಪನಿ ಫರ್ಲೆಂಕೋದಲ್ಲಿ ಅಮೀರ್‌ ಖಾನ್‌ 2 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಮರ್ಸಿಡಿಸ್‌ ಬೆಂಝ್‌ ಎಸ್‌600 ಕಾರನ್ನು ವಿಶೇಷವಾಗಿ ತಮಗೆಂದೇ ಅಮೀರ್‌ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಈ ಬುಲೆಟ್‌ ಪ್ರೂಫ್‌ ಕಾರಿನ ಬೆಲೆ 11.6 ಕೋಟಿ ರೂಪಾಯಿ.

ಇತ್ತೀಚೆಗೆ ಬಿಡುಗಡೆಯಾದ ಲಾಲ್‌ ಸಿಂಗ್‌ ಛಡ್ಡಾ ಚಿತ್ರಕ್ಕಾಗಿ ಅಮೀರ್‌ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಅಮೆರಿಕದ ಜನಪ್ರಿಯ ಚಿತ್ರ ಫಾರೆಸ್ಟ್‌ ಗಂಪ್‌ನ ರಿಮೇಕ್‌ ಇದು. ಈ ಚಿತ್ರದಲ್ಲಿ ಕರೀನಾ ಕಪೂರ್‌ ಹಾಗೂ ಮೋನಾ ಸಿಂಗ್‌ ಕೂಡ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...