alex Certify ದುಪ್ಪಟ್ಟಾ ಹಿಡಿದೆಳೆದು ಮದುವೆಗೆ ಒತ್ತಾಯಿಸುವುದು ಲೈಂಗಿಕ ಕಿರುಕುಳವಲ್ಲ: ಕೋಲ್ಕತ್ತಾ ಹೈಕೋರ್ಟ್‌ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಪ್ಪಟ್ಟಾ ಹಿಡಿದೆಳೆದು ಮದುವೆಗೆ ಒತ್ತಾಯಿಸುವುದು ಲೈಂಗಿಕ ಕಿರುಕುಳವಲ್ಲ: ಕೋಲ್ಕತ್ತಾ ಹೈಕೋರ್ಟ್‌ ಆದೇಶ

ಪ್ರಕರಣವೊಂದರ ವಿಚಾರಣೆ ವೇಳೆ ಕೋಲ್ಕತ್ತಾ ಹೈಕೋರ್ಟ್‌, ಲೈಂಗಿಕ ಕಿರುಕುಳ ಹಾಗೂ ಪೋಸ್ಕೋ ಕಾಯ್ದೆ ಕುರಿತು ವ್ಯಾಖ್ಯಾನ ನೀಡಿದೆ. ದುಪ್ಪಟ್ಟಾ ಹಿಡಿದೆಳೆದು ಮದುವೆಗೆ ಒತ್ತಾಯಿಸುವುದು ಲೈಂಗಿಕ ಕಿರುಕುಳವಲ್ಲ ಹಾಗೂ ಇಂತಹ ಪ್ರಕರಣಕ್ಕೆ ಪೋಸ್ಕೋ ಕಾಯ್ದೆ ಅನ್ವಯಿಸುವುದಿಲ್ಲವೆಂದು ಆದೇಶ ನೀಡಿದೆ.

ನ್ಯಾಯಮೂರ್ತಿ ವಿವೇಕ್‌ ಚೌಧರಿ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್‌ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲದೇ ಅಧೀನ ನ್ಯಾಯಾಲಯ ತೀರ್ಪು ನೀಡುವ ಮುನ್ನ ಕೆಲವೊಂದು ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ  ಎಂದು ಹೇಳಲಾಗಿದೆ. ಇದರಿಂದಾಗಿ ಅಮಾಯಕರಿಗೆ ನ್ಯಾಯ ಸಿಗುವುದಿಲ್ಲವೆಂದು ಹೈಕೋರ್ಟ್ ತಿಳಿಸಿದೆ.

ಪ್ರಕರಣದ ಹಿನ್ನಲೆ

2017 ರ ಆಗಸ್ಟ್‌ ನಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ್ದ ಯುವಕ, ಆಕೆಯ ದುಪ್ಪಟ್ಟಾ ಹಿಡಿದೆಳೆದು ಬಳಿಕ ಕೈ ಹಿಡಿದು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಅಲ್ಲದೇ ಇದಕ್ಕೆ  ಒಪ್ಪದಿದ್ದರೆ ಆಸಿಡ್‌ ಹಾಕುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕಾಂದಿ, ಪೋಸ್ಕೋ ಕಾಯ್ದೆ ಸೆಕ್ಷನ್‌ 8 ಹಾಗೂ 12 ಮತ್ತು ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ 354, 354B, 506 ಮತ್ತು 509 ಅಡಿ ಶಿಕ್ಷೆ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಇದೀಗ ಕೋಲ್ಕತ್ತಾ ಹೈಕೋರ್ಟ್‌ ಈ ಎಲ್ಲ ಪ್ರಕರಣಗಳನ್ನು ಕೈಬಿಟ್ಟಿದೆ. ಆದರೆ ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ 354(1)(ii) ಹಾಗೂ 506 ರ ಅನ್ವಯ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಪರಿಗಣಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...