ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತೆ ಎನ್ನುವ ನಂಬಿಕೆ ಇದೆ. ಆದರೆ ಮನೆಯ ಕ್ಲೀನಿಂಗ್ ಅಷ್ಟು ಸುಲಭವಲ್ಲ. ಈ ಸಿಂಪಲ್ ಟಿಪ್ಸ್ ಬಳಸಿ ಮನೆಯನ್ನು ಫಟಾಫಟ್ ಸ್ವಚ್ಛಗೊಳಿಸಿ.
ಮನೆಯಲ್ಲಿ ಹಾಳಾದ ಅಥವಾ ಮುರಿದುಹೋದ ಸಾಮಾನುಗಳಿದ್ದರೆ ಎಸೆದುಬಿಡಿ. ಇದರಿಂದ ಮನೆ ಸ್ವಚ್ಚವಾಗುವುದಲ್ಲದೆ ನೀಟಾಗಿ ಕಾಣುತ್ತದೆ.
ಸುಳಿವು ನೀಡಿತ್ತು ಪಂಚೆಯಲ್ಲಿದ್ದ ವೀರ್ಯದ ಕಲೆ, ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ
ಹಬ್ಬದ ದಿನ ವಿಶೇಷ ತಿಂಡಿ ತಿನಿಸುಗಳನ್ನು ಮಾಡುವುದರಿಂದ ಅಡಿಗೆ ಮನೆ ಸ್ವಚ್ಛತೆ ಬಹಳ ಮುಖ್ಯ. ಸುಲಭವಾಗಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು 5-6 ಚಮಚ ಬ್ಲೀಚ್ ಮತ್ತು ಡಿಟರ್ಜೆಂಟ್ ಬಿಸಿ ನೀರಿಗೆ ಹಾಕಿ ಪಾತ್ರೆ ತೊಳೆಯಿರಿ. ಪಾತ್ರೆಗಳ ಹೊಳಪು ಹೆಚ್ಚಿರುತ್ತದೆ.
ಮನೆಯ ಗೋಡೆಗಳು ಕೊಳಕಾಗಿದ್ದರೆ ಪೇಂಟ್ ಮಾಡಿ ಅಥವಾ ಗೋಡೆಗಳನ್ನು ಸ್ವಚ್ಛಗೊಳಿಸಲು ವಿನೆಗರ್ ಅನ್ನು ಒಂದು ಸ್ಪಾಂಜ್ ಗೆ ಹಾಕಿದರೆ ಗೋಡೆಯ ಮೇಲಿನ ಕಲೆಗಳು ಮಾಯ.
ಬಾತ್ ರೂಂ ಕೊಳೆಯಾಗಿದ್ರೆ ಬೇಬಿ ಆಯಿಲ್ ಹಾಕಿ ಉಜ್ಜಿ ಸ್ವಲ್ಪ ಹೊತ್ತು ಬಿಟ್ಟು ಕ್ಲೀನ್ ಮಾಡಿ.
ಬಿಪಿಎಲ್, ಅಂತ್ಯೋದಯ ಸೇರಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಗರೀಬ್ ಕಲ್ಯಾಣ್ ಯೋಜನೆಯಡಿ ರೇಷನ್
1 ಕಪ್ ಉಪ್ಪು, ಅಡಿಗೆ ಸೋಡಾ ಮತ್ತು ವಿನೆಗರ್ ಮಿಶ್ರಣ ಸಿಂಕ್ ಪೈಪ್ ಗೆ ಹಾಕಿ ಇದರಿಂದ ಸುಲಭವಾಗಿ ಸಿಂಕ್ ಪೈಪ್ ಕ್ಲೀನ್ ಆಗುತ್ತೆ.
ಮನೆಯ ಟೈಲ್ಸ್ ಸ್ವಚ್ಚಗೊಳಿಸಲು ಅಡುಗೆ ಸೋಡಾ ಬಳಸಿ ಬ್ರಶ್ ಮಾಡಿ. ನಂತರ ಬಿಸಿ ನೀರಿನಿಂದ ತೊಳೆಯಿರಿ.
ಆಲೂಗಡ್ಡೆ ಮತ್ತು ಬೇಕಿಂಗ್ ಸೋಡಾದ ಸಹಾಯದಿಂದ ಕಬ್ಬಿಣದ ಸರಳು, ಕಿಟಕಿ ಮೇಲಿನ ಜಂಕ್ ತೆಗೆದುಹಾಕಿ.