ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುವುದು ವಾಡಿಕೆ. ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆ, ಸಿಹಿ ತಿನಿಸು ಅಥವಾ ಡ್ರೈ ಫ್ರೂಟ್ಸ್ ಕೊಡ್ತಾರೆ. ಪ್ರತಿ ಬಾರಿಯೂ ಇದನ್ನೇ ಕೊಡುವುದಕ್ಕಿಂತ ಹೊಸದೇನನ್ನಾದ್ರೂ ಗಿಫ್ಟ್ ಮಾಡೋಣ ಅನಿಸೋದು ಸಹಜ. ದೀಪಾವಳಿಗೆ ಏನೇನು ಉಡುಗೊರೆ ಕೊಡಬಹುದು ಅನ್ನೋದನ್ನು ನೋಡೋಣ.
ಹಿಂದಿ ʼರಾಷ್ಟ್ರ ಭಾಷೆʼ ಎಂದು ಹೇಳಿ ಕೆಲಸ ಕಳೆದುಕೊಂಡ ಜೊಮ್ಯಾಟೋ ಸಿಬ್ಬಂದಿ…!
ಗಿಡಗಳು: ಬೆಳಕಿನ ಹಬ್ಬದಲ್ಲಿ ಹಸಿರು ಉಳಿಸುವಂತೆ ವಿಭಿನ್ನವಾಗಿ ಸಂದೇಶ ಸಾರಬಹುದು. ಇದಕ್ಕಾಗಿ ನೀವ್ ಮಾಡ್ಬೇಕಾಗಿರೋದಿಷ್ಟೆ, ಗಿಡಗಳನ್ನು ಉಡುಗೊರೆಯಾಗಿ ಕೊಡಿ. ನೀವೇ ನೆಟ್ಟು ಬೆಳೆಸಿದ್ದನ್ನು ಕೊಡಬಹುದು, ಅಥವಾ ಮಾರ್ಕೆಟ್ ನಿಂದ ಖರೀದಿಸಿದ್ರೂ ತೊಂದರೆಯೇನಿಲ್ಲ.
ಸಮಯ: ಅರೆ, ಟೈಮ್ ಹೇಗೆ ಗಿಫ್ಟ್ ಕೊಡೋದು ಅಂತಾ ಕನ್ಫೂಸ್ ಆಗ್ಬೇಡಿ. ಈ ಜಂಜಾಟದ ಬದುಕಿನಲ್ಲಿ ಮನೆಯವರೆಲ್ಲ ಕುಳಿತು ಮಾತನಾಡಲು ಕೂಡ ಸಮಯವೇ ಸಿಗೋದಿಲ್ಲ. ಹಾಗಾಗಿ ಹಬ್ಬದ ನೆಪದಲ್ಲಾದ್ರೂ ಸ್ವಲ್ಪ ಸಮಯ ಮಾಡಿಕೊಂಡು ಪ್ರೀತಿಪಾತ್ರರೊಂದಿಗೆ ಕಳೆದ್ರೆ ಅದೇ ದೊಡ್ಡ ಗಿಫ್ಟ್.
ದೀಪಗಳು: ದೀಪಾವಳಿಯಲ್ಲಿ ಮಣ್ಣಿನ ಹಣತೆಗೆ ಬಹಳ ಪ್ರಾಮುಖ್ಯತೆಯಿದೆ. ಹಾಗಾಗಿ ನೀವೇ ಕೈಯ್ಯಾರೆ ಹಣತೆಗಳನ್ನು ತಯಾರಿಸಿ ಅದನ್ನು ಉಡುಗೊರೆಯಾಗಿ ಕೊಡಬಹುದು.
ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಸಿಬ್ಬಂದಿಗೆ ಬಿಗ್ ಶಾಕ್: ಸಸ್ಪೆಂಡ್ ಮಾಡಿ ಎಸ್.ಪಿ. ಆದೇಶ
ಪತ್ರಗಳು: ಈಗೇನಿದ್ರೂ ವಾಟ್ಸಪ್ ಜಮಾನಾ. ಪತ್ರಗಳನ್ನು ಬರೆಯೋ ಅಭ್ಯಾಸವೇ ತಪ್ಪಿ ಹೋಗಿದೆ. ಹಾಗಾಗಿ ದೀಪಾವಳಿ ಸಂದರ್ಭದಲ್ಲಿ ನಿಮ್ಮ ಮನದ ಭಾವನೆಗಳನ್ನು ಹಾಳೆಗಳ ಮೇಲಿಳಿಸಿ ನಿಮ್ಮ ಪ್ರೀತಿ ಪಾತ್ರರಿಗೆ ಪತ್ರ ಬರೆಯಿರಿ.
DIY ಮೇಣದ ಬತ್ತಿಗಳು: ಹಣತೆಗಳಂತೆ ಮೇಣದ ಬತ್ತಿಗಳಿಗೂ ಬಹಳ ಮಹತ್ವವಿದೆ. ನೀವು ಅವುಗಳನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಿ ಉಡುಗೊರೆ ಕೊಡಬಹುದು.
ಸಿಹಿತಿಂಡಿ: ನಿಮ್ಮ ಕೈಯ್ಯಾರೆ ತಯಾರಿಸಿದ ಸಿಹಿ ತಿನಿಸುಗಳನ್ನು ಉಡುಗೊರೆಯಾಗಿ ಕೊಡಿ.
ದಾನ-ಧರ್ಮ: ದೀಪಾವಳಿಗೆ ಉಡುಗೊರೆಯಾಗಿ ಯಾವುದಾದ್ರೂ ಅನಾಥಾಶ್ರಮ ಅಥವಾ ಬಡಬಗ್ಗರಿಗೆ ದಾನ ಮಾಡಬಹುದು. ನಿಮ್ಮ ಕೈಲಾದ ಸಹಾಯ ಮಾಡುವ ಮೂಲಕ ಬೆಳಕಿನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ.