
ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬದ ದಿನದಂದು ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸುಂದರ ರಂಗೋಲಿಯನ್ನು ಮನೆ ಮುಂದೆ ಹಾಕಲಾಗುತ್ತದೆ. ಮನೆ ಮುಂದೆ ರಂಗೋಲಿಯಿದ್ರೆ ಮಾತ್ರ ಹಬ್ಬದ ಕಳೆ ಹೆಚ್ಚಾಗಲು ಸಾಧ್ಯ.

ರಂಗೋಲಿಗೆ ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಮನೆ ಮುಂದೆ ಹಾಕುವ ರಂಗೋಲಿ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ. ಕೀಟಗಳು ಮನೆ ಪ್ರವೇಶ ಮಾಡದಂತೆ ತಡೆಯುತ್ತದೆ.

ತಾಯಿ ಲಕ್ಷ್ಮಿಯನ್ನು ಆಕರ್ಷಿಸುತ್ತದೆ. ದೀಪಾವಳಿ ದಿನ ಸುಂದರ ರಂಗೋಲಿ ಹಾಕುವ ಪ್ಲಾನ್ ನಲ್ಲಿ ನೀವಿದ್ದರೆ ಇಲ್ಲೊಂದಿಷ್ಟು ರಂಗೋಲಿ ಡಿಸೈನ್ ಗಳಿವೆ. ಟ್ರೈ ಮಾಡಿ.


