ದೀಪಾವಳಿ ಹತ್ತಿರ ಬರ್ತಿದೆ. ಹಬ್ಬಕ್ಕಾಗಿ ಎಲ್ಲೆಡೆ ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬಕ್ಕೆ ಒಂದು ತಿಂಗಳ ಮೊದಲೇ ಕ್ಲೀನಿಂಗ್ ಶುರುವಾಗಿರುತ್ತೆ. ಆದ್ರೆ ಕೊನೆ ಕ್ಷಣದಲ್ಲಿ ಮತ್ತೆ ಮನೆಯನ್ನು ಸ್ವಚ್ಛಗೊಳಿಸುವವರಿದ್ದಾರೆ. ಮನೆ ಸ್ವಚ್ಛಗೊಳಿಸಿ ಹಬ್ಬ ಆಚರಿಸುವ ಮೊದಲು ಕೆಲವೊಂದು ವಿಷ್ಯಗಳನ್ನು ನೀವು ತಿಳಿದುಕೊಳ್ಳಬೇಕು. ಮನೆ ಸ್ವಚ್ಛ ಮಾಡುವಾಗ ನೀವು ಮಾಡುವ ತಪ್ಪು ವಾಸ್ತು ದೋಷಕ್ಕೆ ಕಾರಣವಾಗಬಹುದು.
ಮನೆಯನ್ನು ಸ್ವಚ್ಛಗೊಳಿಸುವ ಮೊದಲು ಮನೆಯಲ್ಲಿರುವ ನಿಷ್ಪ್ರಯೋಜಕ ವಸ್ತುಗಳ ಬಗ್ಗೆ ಗಮನ ನೀಡಿ. ಕೆಲವೊಂದು ವಸ್ತುಗಳನ್ನು ನೀವು ಬಳಸದೆ ವರ್ಷಗಳು ಕಳೆದಿರುತ್ತವೆ. ಹಾಳಾದ ಎಲೆಕ್ಟ್ರಾನಿಕ್ ಉಪಕರಣಗಳು, ಕೈಗಡಿಯಾರ, ಹಳೆ ಉಡುಪು, ಚಪ್ಪಲಿ ಸೇರಿದಂತೆ ಅನೇಕ ಬೇಡದ ವಸ್ತುಗಳು ಮನೆಯಲ್ಲಿರುತ್ತವೆ. ಈ ಎಲ್ಲ ವಸ್ತುಗಳನ್ನು ಮೊದಲು ಮನೆಯಿಂದ ಹೊರ ಹಾಕಿ.
ಪಬ್ ನಲ್ಲಿ ಮದ್ಯ ಆರ್ಡರ್ ಮಾಡಿ ಮುಖ ಸುಟ್ಟುಕೊಂಡ ಮಹಿಳೆ…! ಕೋರ್ಟ್ ಮೆಟ್ಟಿಲೇರಿದಾಕೆಗೆ ಕೊನೆಗೂ ಸಿಕ್ತು ಪರಿಹಾರ
ನಿಮಗೆ ನಿಷ್ಪ್ರಯೋಜಕ ಎನಿಸಿದ ಕೆಲ ವಸ್ತುಗಳು ಇನ್ನೊಬ್ಬರ ಬಳಕೆಗೆ ಬರುತ್ತವೆ. ಅಂತ ವಸ್ತುಗಳನ್ನು ಅವಶ್ಯವಿರುವವರಿಗೆ ನೀಡಿ. ಮನೆಯಲ್ಲಿರುವ ಹಾಳಾದ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ. ಅಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಮನೆಗೆ ಬರುವ ಲಕ್ಷ್ಮಿ ನಕಾರಾತ್ಮಕ ಶಕ್ತಿಗಳನ್ನು ನೋಡಿ ವಾಪಸ್ ಹೋಗ್ತಾಳೆ. ಹಾಗಾಗಿ ಹಾಳಾದ, ನಿಷ್ಪ್ರಯೋಜಕ ವಸ್ತುಗಳನ್ನು ಮನೆಯಲ್ಲಿಡಬೇಡಿ.
ಮನೆಯೊಳಗೊಂದೇ ಅಲ್ಲ ಮನೆ ಸುತ್ತಮುತ್ತಲೂ ಸ್ವಚ್ಛಗೊಳಿಸಿ. ಮನೆ ಹೊರಗಿರುವ ಕಸವನ್ನು ತೆಗೆದು ಹಾಕಿ ಮನೆಯನ್ನು ಬಂಗಲೆಯಂತೆ ಅಲಂಕಾರ ಮಾಡಿ. ಮನೆಯ ಸುತ್ತಮುತ್ತ ಕೊಳಕಿದ್ದರೆ ಲಕ್ಷ್ಮಿ ನಿಮ್ಮ ಮನೆ ಕಡೆ ತಿರುಗಿಯೂ ನೋಡೋದಿಲ್ಲ ಎಂಬುದು ನೆನಪಿರಲಿ.
ಮನೆಯ ಕಿಟಕಿ ಹಾಗೂ ಬಾಗಿಲಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿ ಸ್ವಚ್ಛಗೊಳಿಸಿ. ಬಾಗಿಲಿನ ಮೇಲೆ ಸ್ವಸ್ಥಿಕ ಚಿಹ್ನೆ ಅಥವಾ ಶುಭ-ಲಾಭ ಎಂದು ಬರೆಯಿರಿ. ಬಾಗಿಲಿಗೆ ಎಣ್ಣೆ ಹಾಕುವುದ್ರಿಂದ ಬಾಗಿಲು ಮುಚ್ಚುವಾಗ ಹಾಗೂ ತೆಗೆಯುವಾಗ ಶಬ್ಧ ಬರುವುದಿಲ್ಲ. ಶಬ್ಧ ಬರುವುದು ಅಶುಭ.