alex Certify ದಿ ಕಾಶ್ಮೀರ್​ ಫೈಲ್ಸ್​ಗೆ ಮಾತ್ರವಲ್ಲ, ಇಂಧನ ಖರೀದಿಗೂ ಉಚಿತ ಟಿಕೆಟ್​ ನೀಡಿ: ಕಾಂಗ್ರೆಸ್​ ಸಚಿವ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿ ಕಾಶ್ಮೀರ್​ ಫೈಲ್ಸ್​ಗೆ ಮಾತ್ರವಲ್ಲ, ಇಂಧನ ಖರೀದಿಗೂ ಉಚಿತ ಟಿಕೆಟ್​ ನೀಡಿ: ಕಾಂಗ್ರೆಸ್​ ಸಚಿವ ಆಕ್ರೋಶ

ಕಳೆದೊಂದು ವಾರದಿಂದ ಪೆಟ್ರೋಲ್​ ಹಾಗೂ ಡೀಸೆಲ್​​ಗಳೆರಡರ ಬೆಲೆಯಲ್ಲಿಯೂ ಏರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಇಂಧನ ಖರೀದಿಸುವವರಿಗೆ ಉಚಿತ ಟಿಕೆಟ್​​ ನೀಡಬೇಕು ಎಂದು ರಾಜಸ್ಥಾನದ ಸಚಿವ ಪ್ರತಾಪ್​ ಖಚರಿಯಾವಾಸ್​ ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರು ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾಗೆ ಟಿಕೆಟ್​ ವಿತರಿಸಿದಂತೆಯೇ ಉಚಿತವಾಗಿ ಇಂಧನಗಳನ್ನು ಖರೀದಿ ಮಾಡುವವರಿಗೂ ಕೂಪನ್​ ನೀಡಲಿ ಎಂದಿದ್ದಾರೆ.

ಪಂಚರಾಜ್ಯ ಚುನಾವಣೆಯ ಬಳಿಕ ಬಿಜೆಪಿಯು ಪೆಟ್ರೋಲ್​ ಹಾಗೂ ಡೀಸೆಲ್​ನ ಬೆಲೆಯನ್ನು ಹೆಚ್ಚಿಸುತ್ತಿದೆ. ಇವರೆಲ್ಲ ರಾಮ ಭಕ್ತರಲ್ಲ, ಬದಲಾಗಿ ರಾವಣ ಭಕ್ತರು. ಬಿಜೆಪಿ ನಾಯಕರು ಜನರು ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ನೋಡಬೇಕೆಂದು ಹೇಗೆ ಟಿಕೆಟ್​ಗಳನ್ನು ವಿತರಿಸುತ್ತಿದ್ದಾರೋ ಅದೇ ರೀತಿ ಪೆಟ್ರೋಲ್​, ಡೀಸೆಲ್ ಖರೀದಿ ಮಾಡುವವರಿಗೂ ಕೂಪನ್​ಗಳನ್ನು ನೀಡಲಿ ಎಂದು ಆಗ್ರಹಿಸಿದ್ದಾರೆ.

ದೇಶದಲ್ಲಿ ಪ್ರತಿದಿನವೂ ಪರಿಷ್ಕರಣೆಯಾಗುವ ಪೆಟ್ರೋಲ್​ ಹಾಗೂ ಡೀಸೆಲ್​ ದರವು ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ಯಾವುದೇ ಬದಲಾವಣೆ ಆಗದೇ ಉಳಿದಿತ್ತು. ಆದರೆ ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸತತ ಏಳು ದಿನಗಳಿಂದ ಇಂಧನಗಳ ಬೆಲೆ ಏರಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...