alex Certify ದಿನ ಶುಭವಾಗಿರಬೇಕೆಂದ್ರೆ ಬೆಳಿಗ್ಗೆ ಮಾಡಿ ಈ ʼಕೆಲಸʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನ ಶುಭವಾಗಿರಬೇಕೆಂದ್ರೆ ಬೆಳಿಗ್ಗೆ ಮಾಡಿ ಈ ʼಕೆಲಸʼ

ಪ್ರತಿ ದಿನ ಒಂದೇ ರೀತಿ ಇರೋದಿಲ್ಲ. ಒಂದು ದಿನ ಶುಭಕರವಾಗಿದ್ದರೆ ಮತ್ತೊಂದು ದಿನ ನೋವು, ಬೇಸರ, ಗಲಾಟೆ ಇದ್ದೇ ಇರುತ್ತದೆ. ದಿನದ ಆರಂಭ ಚೆನ್ನಾಗಿದ್ದರೆ ದಿನ ಶುಭಕರವಾಗಿರುತ್ತದೆ ಎಂದು ನಂಬಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ನಾವು ಮನಸ್ಸು ಹಾಳಾಗುವಂತಹ ಕೆಲಸ ಮಾಡಿದ್ರೆ ದಿನವಿಡಿ ಕೆಟ್ಟದಾಗಿರುತ್ತದೆ. ಶುಭ ಕೆಲಸ, ದಿನವನ್ನು ಶುಭಕರವಾಗಿರಿಸುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ  ದೇವಸ್ಥಾನದ ಗಂಟೆ ಶಬ್ಧ ಅಥವಾ ಶಂಖದ ದ್ವನಿ ಕೇಳಿದ್ರೆ ಆ ದಿನ ಮಂಗಳಕರವಾಗಿರುತ್ತದೆ.

ಬೆಳಿಗ್ಗೆ ಹಾಸಿಗೆಯಿಂದ ಕೆಳಗೆ ಕಾಲಿಡುವ ಮೊದಲು ಎರಡೂ ಕೈಗಳ ರೇಖೆಯನ್ನು ನೋಡಿ ಮಂತ್ರ ಜಪಿಸಬೇಕು. ಹೀಗೆ ಮಾಡಿದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಹಾಸಿಗೆಯಿಂದ ಎದ್ದ ತಕ್ಷಣ ಇಷ್ಟದ ದೇವಾನುದೇವತೆಗಳ ದರ್ಶನ ಮಾಡಬೇಕು. ಇಷ್ಟ ದೇವರನ್ನು ನೆನೆದು ನಮಸ್ಕರಿಸಬೇಕು.

ದಿನ ಶುಭಕರವಾಗಿರಬೇಕೆನ್ನುವವರು ಬೆಳಿಗ್ಗೆ ಎದ್ದ ನಂತ್ರ ಸೂರ್ಯ ದರ್ಶನ ಪಡೆದು, ನಮಸ್ಕರಿಸಬೇಕು.

ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರ ಹೋಗುವ ವೇಳೆ ಗೋವು ನಿಮ್ಮ ಕಣ್ಣಿಗೆ ಬಿದ್ದರೆ ಆ ದಿನ ಶುಭಕರವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...