alex Certify ದಿನದ ಈ ಸಮಯದಲ್ಲಿ ಪ್ರಾರಂಭಿಸಬೇಡಿ ಶುಭ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನದ ಈ ಸಮಯದಲ್ಲಿ ಪ್ರಾರಂಭಿಸಬೇಡಿ ಶುಭ ಕೆಲಸ

ಯಾವುದೇ ಶುಭ ಕೆಲಸವನ್ನು ಅಶುಭ ಸಮಯದಲ್ಲಿ ಪ್ರಾರಂಭಿಸಬಾರದು. ಪ್ರತಿ ದಿನ ಕೆಲ ಸಮಯ ಅಶುಭ ಸಮಯವಾಗಿರುತ್ತದೆ. ಆ ಸಮಯದಲ್ಲಿ ಯಾವುದೇ ಶುಭ ಕೆಲಸಗಳನ್ನು ಮಾಡಬಾರದು. ಪ್ರತಿ ದಿನ ಹಗಲು – ರಾತ್ರಿ ಕೆಲಸ ಮಾಡಿದ್ರೂ ಫಲ ಸಿಕ್ಕಿಲ್ಲವೆಂದು ಕೆಲವರು ಹೇಳ್ತಾರೆ. ಅವರಿಗೆ ಫಲ ಸಿಗದಿರಲು ಅವರು ಪ್ರಾರಂಭಿಸಿದ ಕೆಲಸದ ಗಳಿಗೆ ಕಾರಣವಾಗುತ್ತದೆ.

ಶಾಸ್ತ್ರದ ಪ್ರಕಾರ ರಾಹು ಕಾಲದಲ್ಲಿ ಯಾವುದೇ ಶುಭ ಕೆಲಸವನ್ನು ಮಾಡಬಾರದು. ರಾಹು ಕಾಲದಲ್ಲಿ ಮಾಡಿದ ಯಾವುದೇ ಕೆಲಸಕ್ಕೆ ಫಲ ಪ್ರಾಪ್ತಿಯಾಗುವುದಿಲ್ಲ. ಈ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪ್ರತಿ ದಿನ ಬೆಳಿಗ್ಗೆ ಅಥವಾ ಮಧ್ಯಾಹ್ನ ಇಲ್ಲವೇ ಸಂಜೆ ಸಮಯದಲ್ಲಿ ರಾಹು ಕಾಲ ಬರುತ್ತದೆ. ಅದನ್ನು ನೋಡಿಕೊಂಡು ಶುಭ ಕೆಲಸವನ್ನು ಮಾಡಬೇಕು. ಈ ಸಮಯದಲ್ಲಿ ಪ್ರಯಾಣ ಮಾಡುವುದು ನಿಷಿದ್ಧ. ರಾಹುಕಾಲವನ್ನು ಗಮನದಲ್ಲಿಟ್ಟುಕೊಂಡು ಶುಭ ಕೆಲಸವನ್ನು ಶುರು ಮಾಡುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...