alex Certify ದಿನಕ್ಕೆಷ್ಟು ಪಿಸ್ತಾ ತಿಂದರೆ ಆರೋಗ್ಯಕ್ಕೆ ಉತ್ತಮ ? ಇಲ್ಲಿದೆ ತಜ್ಞ ವೈದ್ಯರ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆಷ್ಟು ಪಿಸ್ತಾ ತಿಂದರೆ ಆರೋಗ್ಯಕ್ಕೆ ಉತ್ತಮ ? ಇಲ್ಲಿದೆ ತಜ್ಞ ವೈದ್ಯರ ಸಲಹೆ

ಪಿಸ್ತಾ ಅತ್ಯಂತ ರುಚಿಕರ ಡ್ರೈಫ್ರೂಟ್‌. ಜನರು ಇದನ್ನು ಹಬ್ಬಗಳಲ್ಲಿ ಅಥವಾ ಇತರ ವಿಶೇಷ ಸಂದರ್ಭದಲ್ಲಿ ಆತ್ಮೀಯರಿಗೆ ಉಡುಗೊರೆಯಾಗಿ ನೀಡುತ್ತಾರೆ. ಉಪ್ಪು ಹಾಕಿ ಹುರಿದ ಪಿಸ್ತಾ ಸಂಜೆಯ ಸ್ನಾಕ್‌ಗೆ ಹೇಳಿ ಮಾಡಿಸಿದಂತಿರುತ್ತದೆ.

ಇದು ಪೌಷ್ಟಿಕ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಇದರ ಸೇವನೆಯ ಮಿತಿ ತಿಳಿದಿರಲೇಬೇಕು. ಪಿಸ್ತಾದಲ್ಲಿ ಯಾವುದೇ ಪೋಷಕಾಂಶಗಳ ಕೊರತೆಯಿಲ್ಲ. ಇದು ಸಾಕಷ್ಟು ವಿಟಮಿನ್ ಬಿ 6, ವಿಟಮಿನ್ ಸಿ, ಫೈಬರ್‌, ಸತು, ತಾಮ್ರ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೊಂದಿದೆ. ಆದರೆ ಅತಿಯಾದ ಪಿಸ್ತಾ ಸೇನವೆ ಹಾನಿ ಉಂಟುಮಾಡುತ್ತವೆ.

ಒಂದು ದಿನದಲ್ಲಿ ಎಷ್ಟು ಪಿಸ್ತಾ ತಿನ್ನಬೇಕು  ?

ಹೆಚ್ಚಿನ ಆಹಾರ ತಜ್ಞರು ದಿನಕ್ಕೆ 15 ರಿಂದ 20 ಗ್ರಾಂ ಪಿಸ್ತಾವನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ನೀವು ಇದನ್ನು ಹಲವು ವಿಧಗಳಲ್ಲಿ ತಿನ್ನಬಹುದು. ನೀರಿನಲ್ಲಿ ನೆನೆಸಿಟ್ಟು ಸೇವನೆ ಮಾಡಬಹುದು. ಹುರಿದು ಕೂಡ ತಿನ್ನಬಹುದು. ಮಿತಿಮೀರಿ  ಪಿಸ್ತಾಗಳನ್ನು ಸೇವಿಸಿದರೆ ಅತಿಸಾರ, ಹೊಟ್ಟೆ ನೋವು, ಕರುಳಿನ ನೋವು ಮತ್ತಿತರ ಸಮಸ್ಯೆಗಳು ಉಂಟಾಗಬಹುದು. ಆದರೆ  ನಿಗದಿತ ಪ್ರಮಾಣದಲ್ಲಿ ತಿನ್ನುವುದು ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಪಿಸ್ತಾ ನಮ್ಮ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿರುವ ತಾಮ್ರ ಮತ್ತು ವಿಟಮಿನ್ ಇ, ಕೂದಲು ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಶುಷ್ಕತೆಯನ್ನು ಹೋಗಲಾಡಿಸುತ್ತದೆ. ರಕ್ತಹೀನತೆ, ಆಯಾಸ ಮತ್ತು ದೌರ್ಬಲ್ಯ ಹೊಂದಿರುವ ಜನರು ಪಿಸ್ತಾವನ್ನು ತಿನ್ನಬೇಕು. ಏಕೆಂದರೆ ಅದರಲ್ಲಿ ಕಬ್ಬಿಣ ಸಮೃದ್ಧವಾಗಿದೆ, ಇದು ರಕ್ತಹೀನತೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ.

ವಿಟಮಿನ್ ಬಿ6 ಮತ್ತು ಸತುವು ಪಿಸ್ತಾದಲ್ಲಿ ಕಂಡುಬರುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಪಿಸ್ತಾದಲ್ಲಿ ಫೈಬರ್‌ ಹೇರಳವಾಗಿದೆ. ಇದರಿಂದಾಗಿ ಜೀರ್ಣಕ್ರಿಯೆಯು ಆರೋಗ್ಯಕರವಾಗಿರುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಬಯಸುವವರು, ನಿಯಮಿತವಾಗಿ ಪಿಸ್ತಾವನ್ನು ತಿನ್ನಬೇಕು. ಏಕೆಂದರೆ ಇದನ್ನು ಸೇವಿಸುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ನಂತರ ನೀವು ಅತಿಯಾಗಿ ತಿನ್ನುವುದರಿಂದ ಪಾರಾಗುತ್ತೀರಿ.

ಪಿಸ್ತಾಗಳನ್ನು ನಮ್ಮ ಕಣ್ಣು ಮತ್ತು ಮೆದುಳಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ತಿನ್ನುವುದರಿಂದ ಕಣ್ಣುಗಳು ಚುರುಕಾಗುತ್ತವೆ ಮತ್ತು ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...