ಸಾಂಬಾರು, ರಸಂ ಇದ್ದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ. ಹಾಗಾಗಿ ಟೊಮೆಟೊ ಬಳಸಿ ಕೂಡ ರುಚಿಯಾದ ಪಲ್ಯ ಮಾಡುವ ವಿಧಾನವೊಂದು ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು: 7 ರಿಂದ 8 – ಟೊಮೆಟೊ ಹಣ್ಣು, 1 – ಈರುಳ್ಳಿ, 4 ರಿಂದ 5 ಎಸಳು – ಬೆಳ್ಳುಳ್ಳಿ, ¼ ಟೀ ಸ್ಪೂನ್ – ಸಾಸಿವೆ, 5 ರಿಂದ 6 ಎಸಳು ಕರಿಬೇವು, 1/4 ಟೀ ಸ್ಪೂನ್ – ಅರಶಿನ ಪುಡಿ, 1/2 ಕಪ್ – ಕಾಯಿ ತುರಿ, 1 ಟೀ ಸ್ಫೂನ್ ಖಾರದ ಪುಡಿ, ಎಣ್ಣೆ – 2 ಚಮಚ. ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ. ಅದು ಬಿಸಿಯಾದ ನಂತರ ಅದಕ್ಕೆ ಸಾಸಿವೆ ಸೇರಿಸಿ. ಇದು ಸಿಡಿದಾಗ ಬೆಳ್ಳುಳ್ಳಿ, ಕರಿಬೇವು ಹಾಕಿ. ನಂತರ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಈರುಳ್ಳಿ ತುಸು ಬಣ್ಣ ಬದಲಾದಾಗ ಅದಕ್ಕೆ ಟೊಮೆಟೊ ಹಾಕಿ ಮಿಕ್ಸ್ ಮಾಡಿ. ಟೊಮೆಟೊ ಚೆನ್ನಾಗಿ ಬೆಂದ ಕೂಡಲೇ ಕಾಯಿತುರಿ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷಗಳವರೆಗೆ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ.