alex Certify ದಿಢೀರನೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸ್ತಿದ್ದಾರೆ ಚೀನೀಯರು, ಕಾರಣ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿಢೀರನೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸ್ತಿದ್ದಾರೆ ಚೀನೀಯರು, ಕಾರಣ ಗೊತ್ತಾ…..?

ಚೀನಾದ ನಾಗರಿಕರು ಇತ್ತೀಚಿನ ದಿನಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಉದ್ಯಾನವನಗಳು, ಜಿಮ್‌ ಅಥವಾ ಇತರ ತೆರೆದ ಸ್ಥಳಗಳಲ್ಲಿ ಚೀನಿಯರು ಭರಪೂರ ವ್ಯಾಯಾಮ ಮಾಡ್ತಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಚೀನಾದ ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿನ ಮೂಲಸೌಕರ್ಯವು ಅತ್ಯುತ್ತಮವಾಗಿದೆ, ಇದರಿಂದಾಗಿ ವಾಕಿಂಗ್‌  ಮತ್ತು ವ್ಯಾಯಾಮ ಮಾಡುವವರಿಗೆ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ನಗರದ ಮೂಲೆ ಮೂಲೆಗಳಲ್ಲಿ ಪಾರ್ಕ್‌ಗಳಿವೆ.  ಉದ್ಯಾನವನಗಳಲ್ಲಿ ವಿವಿಧ ವ್ಯಾಯಾಮ ಸಲಕರಣೆಗಳನ್ನೂ ಅಳವಡಿಸಲಾಗಿದೆ.

ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಚೀನಾ ಸರ್ಕಾರ ಮತ್ತು ವಿವಿಧ ಇಲಾಖೆಗಳು ಕಾಲಕಾಲಕ್ಕೆ ಅಭಿಯಾನಗಳನ್ನು ನಡೆಸುತ್ತವೆ. ಇದರಿಂದಾಗಿ ಜನರು ತಮ್ಮ ಬ್ಯುಸಿ ಲೈಫ್‌ನಲ್ಲೂ ಬಿಡುವು ಮಾಡಿಕೊಂಡು ವ್ಯಾಯಾಮ ಮಾಡುತ್ತಿದ್ದಾರೆ. ಚೀನಾದ ರಾಜಧಾನಿ ಬೀಜಿಂಗ್ನಲ್ಲಂತೂ ಅನೇಕ ಜನಪ್ರಿಯ ಮತ್ತು ಪ್ರಸಿದ್ಧ ಉದ್ಯಾನವನಗಳು, ಐತಿಹಾಸಿಕ ಸ್ಥಳಗಳಿವೆ. ಅಲ್ಲಿಗೆ ಹೆಚ್ಚಿನ ಸಂಖ್ಯೆಯ ಸ್ಥಳೀಯರು ಮತ್ತು ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಡ್ರಮ್ ಟವರ್ ಸುತ್ತಲಿನ ಪ್ರದೇಶ, ನ್ಯಾನ್ಲುಕುಸಿಯಾಂಗ್ ಲೇನ್, ಚಿಂಗ್ಶನ್ ಪಾರ್ಕ್ ಹೀಗೆ ಹಲವು ಸ್ಥಳಗಳು ಜನರಿಗೆ ತುಂಬಾ ಇಷ್ಟವಾಗುತ್ತವೆ. ಜನರು ವಾಕಿಂಗ್‌ ಮತ್ತು ವ್ಯಾಯಾಮ ಮಾಡಲು ಅನೇಕ ಗುಂಪುಗಳನ್ನು ಸಹ ರಚಿಸಲಾಗಿದೆ. ಇವುಗಳನ್ನು ಟಿಕ್‌ಟಾಕ್, ಟೌಯಿನ್, ವೀಚಾಟ್, ಕ್ಸಿಯಾಹೋಂಗ್‌ಶು ಮತ್ತು ವೀಬೊ ಇತ್ಯಾದಿ ಚೀನೀ ಜಾಲತಾಣಗಳಲ್ಲಿ ಜನರು ಶೇರ್‌ ಮಾಡಬಹುದು.

ಇಂತಹ ಚಟುವಟಿಕೆಗಳನ್ನು ನಿರಂತರವಾಗಿ ಒಳಗೊಂಡ ಅನೇಕ ಬ್ಲಾಗಿಗರು ಸಹ ಇದ್ದಾರೆ. ಇದರಿಂದ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ಯೋಗ, ಏರೋಬಿಕ್ಸ್ ಮತ್ತು ಇತರ ರೀತಿಯ ವ್ಯಾಯಾಮಗಳ ಲೈವ್ ಶೋಗಳು ವಿವಿಧ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ನಿಯಮಿತವಾಗಿ ರನ್ ಆಗುತ್ತವೆ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಾಮಾಜಿಕ ಮಾಧ್ಯಮ ಪ್ರಮುಖ ಪಾತ್ರ ವಹಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...