alex Certify ದಿಡೀರ್‌ ಅಂತ ತಯಾರಿಸಿ ಮೊಟ್ಟೆ ಪಲ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿಡೀರ್‌ ಅಂತ ತಯಾರಿಸಿ ಮೊಟ್ಟೆ ಪಲ್ಯ…..!

ಬೇಕಾಗುವ ಸಾಮಗ್ರಿ : ಬೇಯಿಸಿದ ಮೊಟ್ಟೆ 5, ಈರುಳ್ಳಿ 3, ಕೊತ್ತಂಬರಿ ಸೊಪ್ಪು 1/2 ಕಪ್, ಟೊಮ್ಯಾಟೋ 1, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎಗ್​ ಮಸಾಲಾ , ಧನಿಯಾ ಪುಡಿ, ಕಾರದಪುಡಿ, ಅರಿಶಿಣ, ಕಪ್ಪು ಮೆಣಸಿನ ಪುಡಿ ತಲಾ 1/2 ಚಮಚ, ಅಡುಗೆ ಎಣ್ಣೆ 2 ಚಮಚ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಮೊದಲು ನೀರಿಗೆ ಉಪ್ಪನ್ನ ಹಾಕಿ ಮೊಟ್ಟೆಯನ್ನ ಬೇಯಿಸಿಕೊಳ್ಳಿ. ಮೊಟ್ಟೆ ತಣ್ಣಗಾದ ಮೇಲೆ ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದೀಗ ಇನ್ನೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಹಾಕಿ ಈರುಳ್ಳಿ ಹೊಂಬಣ್ಣ ಬರುವವರೆಗೂ ಹುರಿಯಿರಿ. ಈ ಮಿಶ್ರಣಕ್ಕೆ ಟೊಮ್ಯಾಟೋ, ಕೊತ್ತಂಬರಿ ಸೊಪ್ಪು ಹಾಗೂ ಎಲ್ಲಾ ಮಸಾಲೆ ಪದಾರ್ಥಗಳನ್ನ ಬೆರೆಸಿ. ಹಸಿ ವಾಸನೆ ಸಂಪೂರ್ಣ ಹೋಗುವವರೆಗೆ ಹುರಿಯಿರಿ.

ಈ ಮಿಶ್ರಣಕ್ಕೆ ಕಟ್​ ಮಾಡಿಕೊಂಡ ಮೊಟ್ಟೆಯನ್ನ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನ ಸೇರಿಸಿ 1 ನಿಮಿಷ ತಿರುಗಿಸಿ. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನ ಉದುರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...