alex Certify ದಾಖಲೆ ಬರೆಯಲಿದೆ ಜಗತ್ತಿನ ಆರ್ಥಿಕತೆ..! ಕೆಲವೇ ವರ್ಷಗಳಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆ ಬರೆಯಲಿದೆ ಜಗತ್ತಿನ ಆರ್ಥಿಕತೆ..! ಕೆಲವೇ ವರ್ಷಗಳಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಭಾರತ

ಕೊರೊನಾ ಹಾಗೂ ರೂಪಾಂತರಿಯ ಹಾವಳಿಗಳ ಮಧ್ಯೆಯೂ ವಿಶ್ವದಲ್ಲಿ ಆರ್ಥಿಕ ಚೇತರಿಕೆ ದಾಖಲೆಯ ಭರವಸೆ ನೀಡುತ್ತಿದ್ದು, ಭಾರತದ ಆರ್ಥಿಕತೆಯ ಪ್ರಗತಿಯೂ ಆಶಾಕಿರಣ ಮೂಡಿಸುತ್ತಿದೆ.

ವಿಶ್ವವು ಇದೇ ಮೊಟ್ಟ ಮೊದಲ ಬಾರಿಗೆ ಸರಿಸುಮಾರು 100 ಟ್ರಿಲಿಯನ್ ಡಾಲರ್ ಅಂದರೆ, 7,539 ಲಕ್ಷ ಕೋಟಿ ರೂಪಾಯಿ ಆರ್ಥಿಕತೆಯನ್ನು ಮುಂದಿನ ವರ್ಷ ಸಾಧಿಸಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಆರ್ಥಿಕತೆಯ ವರದಿಯನ್ನು ಬ್ರಿಟನ್ ನ ಆರ್ಥಿಕ ಸಲಹಾ ಸಂಸ್ಥೆಯಾಗಿರುವ ಸಿಇಬಿಆರ್ ವರದಿ ಮಾಡಿದ್ದು, ಭಾರತವು ಮುಂದಿನ ದಿನಗಳಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದೆ. ಅಲ್ಲದೇ, ಭಾರತದ ಆರ್ಥಿಕತೆ ಮುಂದಿನ ವರ್ಷ ಫ್ರಾನ್ಸ್ ನ ಆರ್ಥಿಕತೆ ದಾಟಿ, 2023ರ ವೇಳೆಗೆ ಬ್ರಿಟನ್ ನ್ನೂ ಮೀರಿ ವಿಶ್ವದ 6ನೇ ಶ್ರೀಮಂತ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ವರದಿ ಹೇಳಿದೆ.

ಕೋವಿಡ್-19ಗೆ ಬೂಸ್ಟರ್ ಶಾಟ್ ಪಡೆಯಲು ‘ಹೋಮ್ ಅಲೋನ್’ ಮೀಮ್ ವಿಡಿಯೋ ಹಂಚಿಕೊಂಡ ಪೂನಾವಾಲಾ..!

ಆರ್ಥಿಕತೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡು ಸಾಗುತ್ತಿರುವ ಇಂಡೊನೇಷ್ಯಾ 2036ರ ಹೊತ್ತಿಗೆ 9ನೇ ಸ್ಥಾನಕ್ಕೆ ಏರಬಹುದು. ರಷ್ಯಾ ಕೂಡ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಅದು 2036ರ ವೇಳೆಗೆ ಆರ್ಥಿಕತೆಯ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಬಂದು ನಿಲ್ಲಬಹುದು ಎಂದು ವರದಿ ಹೇಳಿದೆ..

ಜರ್ಮನಿ ಕೂಡ ಆರ್ಥಿಕತೆಯ ಸುಧಾರಣೆಗಳನ್ನು ಮಾಡುತ್ತ ಜಪಾನ್ ನ್ನು ಹಿಂದಿಕ್ಕುವ ಪ್ರಯತ್ನ ಮಾಡುತ್ತಿದ್ದು, ಇದು 2033ರ ವೇಳೆಗೆ ಸಾಧ್ಯವಾಗಬಹುದು. ಇನ್ನು ಅಮೆರಿಕವನ್ನು ಹಿಂದಿಕ್ಕುವ ಕನಸು ಕಾಣುತ್ತಿರುವ ಚೀನಾ, 2030ರ ವೇಳೆಗೆ ಆ ಕನಸು ನನಸು ಮಾಡಿಕೊಳ್ಳಬಹುದು ಎಂದು ವರದಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...