alex Certify ದಾಂಪತ್ಯ ಜೀವನಕ್ಕೆ ಅಡ್ಡಿಯುಂಟು ಮಾಡುವ ಈಸ್ಟ್ರೋಜನ್​ ಕೊರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯ ಜೀವನಕ್ಕೆ ಅಡ್ಡಿಯುಂಟು ಮಾಡುವ ಈಸ್ಟ್ರೋಜನ್​ ಕೊರತೆ

ಮಹಿಳೆಯರಲ್ಲಿ ದಾಂಪತ್ಯ ಜೀವನ ಮತ್ತು ಸಂತಾನೋತ್ಪತ್ತಿಗೆ ಕಾರಣವಾಗುವ ಈಸ್ಟ್ರೋಜನ್​ ಹಾರ್ಮೋನ್ ವ್ಯತ್ಯಾಸದಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಲೈಂಗಿಕ ನಿರಾಸಕ್ತಿ, ಖಿನ್ನತೆ, ಕೂದಲು ಉದುರುವುದು, ತಲೆನೋವು, ಮುಟ್ಟಿನ ಅಸಮತೋಲನ, ನೆನಪಿನ ಶಕ್ತಿಯ ಕೊರತೆ, ತೂಕ ನಷ್ಟ, ಮೂಡ್​ ಸ್ವಿಂಗ್ಸ್ ಈ ಎಲ್ಲಾ ಲಕ್ಷಣಗಳು ಈಸ್ಟ್ರೋಜನ್​ ಕೊರತೆಯನ್ನು ಎತ್ತಿ ತೋರಿಸುತ್ತವೆ.

ಈ ನಿಟ್ಟಿನಲ್ಲಿ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನೋ ವಿವರಣೆ ಇಲ್ಲಿದೆ ಗಮನಿಸಿ.

ವೈದ್ಯರ ಭೇಟಿ : ಮೇಲಿನ ಎಲ್ಲಾ ಲಕ್ಷಣಗಳು ನಿಮ್ಮಲ್ಲಿದ್ದರೆ ಮೊದಲು ವೈದ್ಯರನ್ನು ಭೇಟಿಯಾಗಿ ಅದನ್ನು ದೃಢಪಡಿಸಿಕೊಳ್ಳಿ.

ಆಹಾರ ಕ್ರಮ ಬದಲಾವಣೆ : ಏಪ್ರಿಕಾಟ್, ಎಲೆಕೋಸು, ಬ್ರೊಕೋಲಿ, ಕುಂಬಳ ಬೀಜ, ಅಗಸೇ ಬೀಜ, ಧಾನ್ಯಗಳು, ಸೋಯಾ, ಟೋಫು , ಡ್ರೈ ಫ್ರೂಟ್ಸ್ ಹೆಚ್ಚಾಗಿ ಬಳಸಿ. ಮೆಗ್ನಿಶಿಯಂ ಅಂಶ ಹೆಚ್ಚಾಗಿರುವ ಆಹಾರ ಸೇವಿಸಿ.

ಟೆಕ್ಕಿಯ ಕುರಿ ಸಾಕಾಣಿಕೆಯ ಯಶೋಗಾಥೆ

ಹರ್ಬಲ್ ಟೀ : ಮೂಲಿಕೆಗಳಿಂದ , ಚೂರ್ಣಗಳಿಂದ ತಯಾರಾಗುವ ಹರ್ಬಲ್ ಟೀ ಸೇವನೆ ಈಸ್ಟ್ರೋಜನ್ ಹೆಚ್ಚಿಸಲು ಸಹಕಾರಿ.

ಕಾಫಿ : ಸಣ್ಣ ಕಪ್ ಕಾಫಿ ಸೇವನೆಯೂ ಈಸ್ಟ್ರೋಜನ್ ಕೊರತೆ ನೀಗಿಸಿ ನಿಮ್ಮನ್ನು ಉಲ್ಲಾಸಭರಿತರನ್ನಾಗಿ ಮಾಡುತ್ತದೆ. ಆದರೆ ಅಡಿಕ್ಷನ್ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

ವ್ಯಾಯಾಮ : ಹಿತ ಮಿತವಾಗಿ ವ್ಯಾಯಾಮ ಅಳವಡಿಸಿಕೊಳ್ಳಿ. ಈಸ್ಟ್ರೋಜನ್ ಸಮತೋಲನದಲ್ಲಿಡಲು ನೆರವಾಗುವ ವರ್ಕ್​ಔಟ್, ಆಸನಗಳಿಗೆ ಹೆಚ್ಚು ಆದ್ಯತೆ ನೀಡಿ.

ನೀರು : ದಿನ ನಿತ್ಯ ನೀರು, ಎಳನೀರು, ಮಜ್ಜಿಗೆ, ಜ್ಯೂಸ್, ಹರ್ಬಲ್ ಟೀ ಸೇರಿದಂತೆ ಮೂರು ಲೀಟರ್​ನಷ್ಟು ದ್ರವ ದೇಹ ಸೇರಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...