alex Certify ದಪ್ಪಗಾಗಲು ಇಲ್ಲಿದೆ ಸರಳ ʼಉಪಾಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಪ್ಪಗಾಗಲು ಇಲ್ಲಿದೆ ಸರಳ ʼಉಪಾಯʼ

ದಪ್ಪ ಇರುವವರು ಸಣ್ಣ ಆಗಬೇಕೆಂದು ಬಯಸಿದರೆ, ಸಣ್ಣ ಇರುವವರು ಸದಾ ದಪ್ಪಗಾಗುವ ಕನಸು ಕಾಣುತ್ತಿರುತ್ತಾರೆ. ಅವರಿಗಾಗಿ ಒಂದಿಷ್ಟು ಟಿಪ್ಸ್.

ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅಶ್ವ ಗಂಧದ ಪುಡಿ, ಒಂದೂವರೆ ಚಮಚ ಜೇನುತುಪ್ಪ ಬೆರೆಸಿ. ಹೀಗೆ ದಿನಕ್ಕೆ ಮೂರು ಬಾರಿ ಮಾಡಿ ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದು ಹಸಿವನ್ನು ಹೆಚ್ಚಿಸುವುದಲ್ಲದೆ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ನೀಡುತ್ತದೆ.

ಬಾದಾಮಿ ಮತ್ತು ಒಣದ್ರಾಕ್ಷಿಯನ್ನು 8 ತಾಸು ನೆನೆಸಿ. ಬಾದಾಮಿ ಸಿಪ್ಪೆಯನ್ನು ತೆಗೆಯಿರಿ. ಇದಕ್ಕೆ ಗೋಡಂಬಿ ಸೇರಿಸಿ ಪುಡಿ ಮಾಡಿ. ಬಿಸಿ ಹಾಲಿಗೆ ಬೆರೆಸಿ ಕುಡಿಯಿರಿ. ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿಕೊಳ್ಳಬಹುದು. ಈ ಹಾಲನ್ನು ಪ್ರತಿದಿನ ಎರಡು ಬಾರಿ ಕುಡಿಯಿರಿ.

ಚೆನ್ನಾಗಿ ನಿದ್ದೆ ಮಾಡಿ, ಆಹಾರದಲ್ಲಿ ತುಪ್ಪವನ್ನು ಬೆರೆಸಿ ತಿನ್ನಿ, ಬಾಳೆಹಣ್ಣು ತಿನ್ನಿ. ಇದರಿಂದ ಶೀಘ್ರವಾಗಿ ಆರೋಗ್ಯಯುತವಾಗಿ ದಪ್ಪವಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...