alex Certify ಥೈರಾಯ್ಡ್ ನಿಯಂತ್ರಿಸುತ್ತವೆ ಈ ಮೂರು ಬಗೆಯ ಜ್ಯೂಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ನಿಯಂತ್ರಿಸುತ್ತವೆ ಈ ಮೂರು ಬಗೆಯ ಜ್ಯೂಸ್‌

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಥೈರಾಯ್ಡ್‌ ಅನ್ನು ನಿಯಂತ್ರಣದಲ್ಲಿಡಲು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಆಗ ಮಾತ್ರ ನೀವು ಈ ರೋಗದ ವಿರುದ್ಧ ಹೋರಾಡಲು ಸಾಧ್ಯ. ಕೆಲವು ಸುಲಭವಾದ ಜ್ಯೂಸ್‌ಗಳನ್ನು ಮಾಡಿ ಕುಡಿಯುವುದರಿಂದ ಥೈರಾಯ್ಡ್‌ ಅನ್ನು ಕಂಟ್ರೋಲ್‌ ಮಾಡಬಹುದು. ಅವುಗಳಲ್ಲೊಂದು ಸೋರೆಕಾಯಿ ಜ್ಯೂಸ್‌.

ಥೈರಾಯ್ಡ್ ಗ್ರಂಥಿಯು ತೂಕವನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ. ತೂಕ ಹೆಚ್ಚಾದ್ರೆ ಮತ್ತೊಂದಿಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಾಮನ್.‌ ಹೆಚ್ಚಿನವರು ಥೈರಾಯ್ಡ್‌ ಸಮಸ್ಯೆಗೆ ಔಷಧಿಗಳನ್ನು ತೆಗೆದುಕೊಳ್ತಾರೆ. ಆಹಾರದಲ್ಲೂ ಬದಲಾವಣೆ ಮಾಡಿಕೊಂಡರೆ ಈ ರೋಗದ ನಿಯಂತ್ರಣ ಇನ್ನಷ್ಟು ಸುಲಭವಾಗುತ್ತದೆ. ಸೋರೆಕಾಯಿ ಅತ್ಯಂತ ಆರೋಗ್ಯಕರ ತರಕಾರಿಗಳಲ್ಲೊಂದು.

ಥೈರಾಯ್ಡ್‌ ಸಮಸ್ಯೆ ಇದ್ದರೆ ಖಂಡಿತವಾಗಿಯೂ ಅದನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ. ಸೋರೆಕಾಯಿಯ ಜ್ಯೂಸ್‌ ಮಾಡಿ ಕುಡಿಯುವುದರಿಂದ ಥೈರಾಯ್ಡ್ ನಿಯಂತ್ರಣ ಸಾಧ್ಯ ಎನ್ನುತ್ತಾರೆ ತಜ್ಞರು. ಜಲಕಂಭಿ ಎಂಬ ನೀರಿನಲ್ಲಿ ಬೆಳೆಯುವ ಗಿಡಗಳ ಎಲೆಗಳ ಜ್ಯೂಸ್‌ ಸೇವನೆಯಿಂದ ಕೂಡ ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಸಾಕಷ್ಟು ಲಾಭವಾಗುತ್ತದೆ. ಈ ರಸವು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಎರಡು ಕಪ್‌ನಷ್ಟು ಈ ಎಲೆಗಳು ಮತ್ತು ಎರಡು ಸೇಬು ಹಣ್ಣುಗಳನ್ನು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ 1 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಪರಿಣಾಮ ಚೆನ್ನಾಗಿರುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ತೂಕವೂ ಕಡಿಮೆಯಾಗುತ್ತದೆ. ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ಸಹ ಪ್ರಯೋಜನಕಾರಿಯಾಗಿದೆ. ಈ ಎರಡೂ ರಸಗಳು ಥೈರಾಯ್ಡ್‌ ನಿಯಂತ್ರಿಸುತ್ತವೆ. ಇದನ್ನು ಕುಡಿಯುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಕಬ್ಬಿಣಾಂಶದ ಕೊರತೆ ಸಹ ನೀಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...